ಗುರು ರಾಘವೇಂದ್ರ ಸ್ವಾಮಿಗಳು ತಮಿಳುನಾಡಿನ ಭುವನಗಿರಿಯಲ್ಲಿ ಮನ್ಮಥ ನಾಮ ಸಂವತ್ಸರದಲ್ಲಿ ಜನಿಸಿ, ಮದ್ವಮತ ಸಂಪ್ರದಾಯವನ್ನು ಅವಲಂಬಿಸಿ, ಸಶರೀರರಾಗಿ ಬೃಂದಾವನಸ್ತರಾದಂತಹ ಮಂತ್ರಾಲಯ, ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಪವಿತ್ರ ಧಾರ್ಮಿಕ ಸ್ಥಳ.
ಬೆಂಗಳೂರಿನಿಂದ ಮಂತ್ರಾಲಯಕ್ಕೆ ರೈಲು ವ್ಯವಸ್ಥೆ ಇದ್ದು. ಮಂತ್ರಾಲಯ ರೋಡ್ ಹತ್ತಿರವಾದಂತಹ ರೈಲ್ವೆ ನಿಲ್ದಾಣ. ಆಟೋ ಮತ್ತು ಕ್ಯಾಬ್ ಗಳ ವ್ಯವಸ್ಥೆ ಇರೋದ್ರಿಂದ ಭಕ್ತಾದಿಗಳು ಸುಲಭವಾಗಿ ಮಂತ್ರಾಲಯದ ಮಠಕ್ಕೆ ತಲುಪಬಹುದು.
ಮಂತ್ರಾಲಯದ ಮಠದವರು ಅನೇಕ ವಸತಿ ಗೃಹಗಳನ್ನು ನಿರ್ಮಿಸಿದ್ದಾರೆ. ಭಕ್ತಾದಿಗಳು ಆನ್ಲೈನ್ ನಲ್ಲಿ ಅಡ್ವಾನ್ಸ್ ಬುಕಿಂಗ್ ಮಾಡಿ ರೂಮ್ ಗಳನ್ನು ಮುಂಗಡವಾಗಿ ಬುಕಿಂಗ್ ಮಾಡಬಹುದು.
ಆನ್ ಲೈನ್ ಅಡ್ವಾನ್ಸ್ ರೂಮ್ ಬುಕಿಂಗ್ : https://srsmatha.org/
ಮಂತ್ರಾಲಯದ ದಂಡೆಯಲ್ಲಿ ತುಂಗಭದ್ರಾ ನದಿ ಹರಿಯುತ್ತಿರುವುದರಿಂದ ಭಕ್ತಾದಿಗಳು ತುಂಗಭದ್ರಾ ನದಿಯ ಸ್ಥಾನವನ್ನು ಮಾಡಿ, ರಾಯರ ಮಠದ ಎಡಭಾಗದಲ್ಲಿ ತಾಯಿ ಮಂಚಾಲಮ್ಮನ ದರ್ಶನ ಪಡೆದು ರಾಯರ ಮಠದ ಒಳಗೆ ಗುರು ರಾಯರ ಬೃಂದಾವನ ದರ್ಶನವನ್ನು ಮಾಡಬಹುದು.
ಭಕ್ತಾದಿಗಳು ಹೆಜ್ಜೆ ನಮಸ್ಕಾರ, ಉರುಳು ಸೇವೆಯ ಪ್ರದಕ್ಷಣೆಗಳ ಮುಖಾಂತರ ತಮ್ಮ ಹರಕೆಗಳನ್ನು ರಾಯರಿಗೆ ಅರ್ಪಿಸಿ ತಮ್ಮ ಇಷ್ಟಾರ್ಥಗಳನ್ನು ಪಡೆಯಬಹುದು.
ಮಧ್ಯಾಹ್ನದ ವೇಳೆ ರಾಯರ ಮಠದಲ್ಲಿ ಊಟದ ವ್ಯವಸ್ಥೆ ಕೂಡ ಇರೋದ್ರಿಂದ, ಭಕ್ತಾದಿಗಳು ಊಟದ ಪ್ರಸಾದವನ್ನು ಮಾಡಬಹುದು ಹಾಗೂ ಪರಿಮಿಳ ಪ್ರಸಾದವನ್ನು ಕೌಂಟರ್ ನಲ್ಲಿ ನಿಂತ್ಕೊಂಡು ಪರಿಮಳ ಪ್ರಸಾದವನ್ನು ಪಡೆಯಬಹುದು.
ಭಕ್ತಾದಿಗಳು ಸಮಯಾವಕಾಶವಿದ್ದರೆ ಪಂಚಮುಖಿ ಆಂಜನೇಯ ದೇವಸ್ಥಾನ, ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನವನ್ನು ಭೇಟಿ ಮಾಡಬಹುದು. ವಿಶೇಷ ಸಂದರ್ಭದಲ್ಲಿ ದೇವರನ್ನು ಹೊತ್ತಯ್ಯುವ ದೇವಾಲಯದ ಆನೆಗಳು, ಅದ್ಭುತವಾದಂತಹ ರಥ ದೃಶ್ಯಗಳನ್ನ ಭಕ್ತಾದಿಗಳು ನೋಡಬಹುದು.
ಶ್ರೀ ರಾಘವೇಂದ್ರ ಸ್ವಾಮಿ ಮಠ, ಮಂತ್ರಾಲಯ
ಸಂಪರ್ಕದಲ್ಲಿರಿ
T +91-08512-279459 / 28
ಉ: info@srsmutt.org
ಎಸ್.ಆರ್.ಎಸ್. ಮಠ,
ಮಂತ್ರಾಲಯಂ, ಅದೋನಿ (ಜಿಲ್ಲೆ),
ಕರ್ನೂಲ್ ಜಿಲ್ಲೆ, ಆಂಧ್ರಪ್ರದೇಶ, ಭಾರತ
ಆನ್ ಲೈನ್ ಅಡ್ವಾನ್ಸ್ ರೂಮ್ ಬುಕಿಂಗ್
https://srsmatha.org/
0 Comments