Header Ads Widget

Responsive Advertisement

ಮಂದರಗಿರಿ ಜೈನ್ ಮಂದಿರ - ಮೊದಲ ಪಿಂಚಿ (ನವಿಲುಗರಿ ಬೀಸಣಿಗೆ) ಆಕಾರದ ಗುರುಮಂದಿರ


ಮಂದರಗಿರಿ ಜೈನ್ ಮಂದಿರ - ಮೊದಲ ಪಿಂಚಿ (ನವಿಲುಗರಿ ಬೀಸಣಿಗೆ) ಆಕಾರದ ಗುರುಮಂದಿರ


ಬೆಂಗಳೂರಿನಿಂದ ಒಂದು ದಿವಸ ಪ್ರವಾಸ ಮಾಡಲು ಪ್ಲಾನ್ ಮಾಡುತ್ತಿದ್ದರೆ 
ಮಂದರಗಿರಿ ಜೈನ್ ಮಂದಿರ  ಒಂದು ಒಳ್ಳೆಯ ಆಯ್ಕೆ ನಿರ್ಜನವಾದ ಸುಂದರವಾದ ಜಾಗ ಮಂದರಗಿರಿ ಬೆಟ್ಟ ಅಥವಾ ಬಸತಿ ಬೆಟ್ಟ, ಜೈನ್ ಮಂದಿರ, ಚಂದ್ರನಾಥ ತೀರ್ಥಂಕರವರ ವಿಗ್ರಹ, ಮೈದಳ ಕೆರೆ ಇವುಗಳು ನಿಮ್ಮ ಮನಸ್ಸಿಗೆ ಖುಷಿ ಕೊಡುತ್ತದೆ.

ಬೆಂಗಳೂರಿನಿಂದ ತುಮಕೂರಿಗೆ ಹೋಗುವ ಮಾರ್ಗದಲ್ಲಿ ಸುಮಾರು 65 ಕಿಲೋಮೀಟರ್ ದೂರದಲ್ಲಿ ಇರುವುದೇ ಮಂದರಗಿರಿ ಜೈನ್ ಮಂದಿರ ಅಥವಾ ಬಸದಿ ಬೆಟ್ಟ.

ಸ್ಥಳ ಪರಿಚಯ

ಸಾವಿರ ವರ್ಷ ಅತಿಶಯ ಕ್ಷೇತ್ರ ಚಕ್ರವರ್ತಿ ಪ್ರಥಮಾಚಾರ್ಯ ಶಾಂತಿ ಸಾಗರ ಜಿ ಮಹಾರಾಜರ ಸಾಧನೆಯ ಕ್ಷೇತ್ರ ಹಾಗೂ ಜೈನ ಇತಿಹಾಸದ ಮೊದಲ ಪಿಂಚಿ (ನವಿಲುಗರಿ ಬೀಸಣಿಗೆ) ಆಕಾರದ ಗುರುಮಂದಿರ ತುಂಬಾ ಆಕರ್ಷಣೀಯವಾಗಿದೆ.

ಅತಿ ಎತ್ತರವಾದ ಚಂದ್ರನಾಥ ತೀರ್ಥಂಕರ ವಿಗ್ರಹ ಮತ್ತೊಂದು ಆಕರ್ಷಣೀಯ ಭಾಗವಾಗಿದೆ.


ಬಸದಿ ಬೆಟ್ಟ ಸುಮಾರು 450ಕ್ಕೂ ಹೆಚ್ಚು ಮೆಟ್ಟಲುಗಳಿಂದ ಕೂಡಿದ್ದು ಹತ್ತಲು ಅನುಕೂಲಕರವಾಗಿದೆ. ಬಸದಿ ಬೆಟ್ಟದ ಮೇಲೆ ಜೈನರ ಮಂದಿರ ,ಮೈದಾಳ ಕೆರೆ, ಸುತ್ತಮುತ್ತಲಿನ ಪರಿಸರ, ತಂಪಾದ ಗಾಳಿ ತುಂಬಾ ಖುಷಿ ತರುವುದಂತೂ ನಿಜ.
ಬೆಟ್ಟ ಹತ್ತುವಾಗ ಮೆಟ್ಟಿಲುಗಳನ್ನು ಉಪಯೋಗಿಸಿ ಜೊತೆಗೆ ನೀರಿನ ಬಾಟಲ್ ಇದ್ದರೆ ಒಳ್ಳೆಯದು ಬೆಟ್ಟದ ಮೇಲೆ ಯಾವುದೇ ಹೋಟೆಲ್ ಗಳು ವ್ಯವಸ್ಥೆ ಇರುವುದಿಲ್ಲ.

ಕಾರ್ ಪಾರ್ಕಿಂಗ್ ವ್ಯವಸ್ಥೆ ಇದೆ. ಸಣ್ಣ ಅಂಗಡಿಗಳು ಸೌತೆಕಾಯಿ ಚಿರುಮುರಿ ಹಾಗೂ ಹಣ್ಣುಗಳನ್ನು ಮಾರುತ್ತ ಇರುತ್ತಾರೆ ಬಸ ವ್ಯವಸ್ಥೆ ತುಮಕೂರಿನಿಂದ ಪಂಡಿತರಹಳ್ಳಿಯವರೆಗೂ ಇರುತ್ತದೆ.

ಮಾಹಿತಿ
ಪ್ರವಾಸಿಗರು ಪ್ಲಾಸ್ಟಿಕ್ ಬಾಟಲಿಗಳು ಕಸಗಳನ್ನು ಹಾಕದೆ ಸ್ವಚ್ಛತೆ ಕಾಪಾಡುವುದು ಒಳ್ಳೆಯದು ಕಾಪಾಡುವುದು ಒಳ್ಳೆಯದು. 

ಆದಷ್ಟು ನೀವು ಬೆಳಗ್ಗೆ ತಲುಪಿದರೆ ವಾತಾವರಣ ತಂಪಾಗಿದ್ದು ನೋಡಲು ಖುಷಿ ಕೊಡುತ್ತದೆ.


ತಲುಪುವ ಮಾರ್ಗ : ಗೂಗಲ್ ಮ್ಯಾಪ್



Post a Comment

0 Comments