Header Ads Widget

Responsive Advertisement

ಬನವಾಸಿಯನ್ನ ಒಮ್ಮೆಯಾದರೂ ನೋಡಲೇಬೇಕು

ಪ್ರಪ್ರಥಮ ಕನ್ನಡ ಸಾಮ್ರಾಜ್ಯ,  ಕದಂಬರು ಕಟ್ಟಿ ಬೆಳೆಸಿದನಾಡು ಹಾಗೂ ಆದಿಕವಿ ಪಂಪನ ಹುಟ್ಟೂರು ಬನವಾಸಿ  
ಕದಂಬರ ಕುಲತಿಲಕನಾದ ಮಯೂರ ವರ್ಮ ಕಾಂಚಿಪುರಕ್ಕೆ ಹೋಗಿದ್ದಾಗ ಬ್ರಾಹ್ಮಣ್ಯಕ್ಕೆ ಆದ ಅವಮಾನವನ್ನು ಸಹಿಸಲಾರದೆ, ಜನಿವಾರ, ದರ್ಭೆ ಹಿಡಿಯುವ ಕೈಯಲ್ಲಿ ಖಡ್ಗ ಹಿಡಿದ ವೀರ ಪುರುಷ.

ಮಯೂರನ ಸೋಲಿಸಲು ಪಲ್ಲವರು ಪ್ರಯತ್ನಿಸಿ ಕೊನೆಗೆ ತಾವೇ ಸೋತು, ಪಶ್ಚಿಮ ಸಮುದ್ರದಿಂದ ಪೂರ್ವದ ಮಲಪ್ರಭೆಯವರೆಗಿನ ಪ್ರದೇಶಕ್ಕೆ ಮಯೂರನನ್ನೇ ಅಧಿಪತಿಯನ್ನಾಗಿ ಮಾಡಿದರು. ಈ ಮೂಲಕ ಅಚ್ಚ ಕನ್ನಡ ಸಂಸ್ಥಾನವನ್ನು ಕಟ್ಟಿದ ಮಯೂರ ವರ್ಮ ಬನವಾಸಿಯನ್ನು ರಾಜಧಾನಿಯನ್ನಾಗಿ ಮಾಡಿದ.

ಕದಂಬರ ಮೊದಲ ದೊರೆ ಮಯೂರ ಶರ್ಮ ಎಂಬ ದೊರೆಯು ಈ ಮಧುಕೇಶ್ವರ ದೇವಾಲಯವನ್ನು ನಿರ್ಮಾಣ ಮಾಡಿದ ಎಂದು ನಂಬಲಾಗಿದೆ.

ಬನವಾಸಿಯ ಮಧುಕೇಶ್ವರ ದೇವಸ್ಥಾನ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿರುವ ಪ್ರಾಚೀನ ಹಿಂದು ದೇವಾಲಯ
ನಮ್ಮೆಲ್ಲರಿಗೂ ಆದಿಕವಿ ಪಂಪನು ವರ್ಣಿಸಿದ್ದ ಬನವಾಸಿ ಹೆಚ್ಚು ಪರಿಚಯ ಅಂಕುಶದಿಂದ ತಿಳಿದರು ನೆನೆಯುವುದೆನ್ನ ಮನಂ ಬನವಾಸಿ ದೇಶಂ ಎಂದ ದೇಶಪ್ರೇಮಿ ಆದಿ ಕವಿ ಪಂಪನ ದೇಶವೇ ಬನವಾಸಿ

ದೇವಾಲಯ ಪ್ರವೇಶಿಸುವಾಗ ಮೊದಲು ಎದುರಾಗುವುದು ಎರಡು ಆನೆಗಳ ಆಕೃತಿಗಳು. ಮತ್ತೊಂದು ಸುತ್ತಿನಲ್ಲಿ 7 ಅಡಿ ಎತ್ತರದ  ಏಕಶೀಲ ನಂದಿ ನಿಮ್ಮನ್ನು ಸ್ವಾಗತಿಸುತ್ತದೆ.  
ಇಂಥ ಆದಿಕವಿ ಪಂಪನ ತವರೂರು ಬನವಾಸಿಯಲ್ಲಿ ಎಲ್ಲರನ್ನೂ ಆಕರ್ಷಿಸುವ ಸ್ಥಳವೇ ಮಧುಕೇಶ್ವರ ದೇವಸ್ಥಾನದ ಜೇನು ತುಪ್ಪದ ಬಣ್ಣದಲ್ಲಿರೋ  ಶಿವಲಿಂಗ.  ಅಲ್ಲದೇ ಆಸ್ತಾನ ಮಂಟಪ, ತ್ರಿಲೋಕ ಮಂಟಪ, ಹಾಗೂ ದೊಡ್ಡ ನಂದಿ. ಅಷ್ಟೇ ಅಲ್ಲದೇ ದ್ರಾವಿಡರ ಕಾಲದ ವೀರಭದ್ರ ದೇವಾಲಯವೂ ಎಂಥ ಅರಸಿಕರನ್ನೂ ಆಕರ್ಷಿಸುತ್ತದೆ.

ಈ ನಂದಿಯ ಒಂದು ಕಣ್ಣು ಮಧುಕೇಶ್ವರನ ಕಡೆಗೆ ದೃಷ್ಟಿ ನೆಟ್ಟರೆ, ಮತ್ತೊಂದು ಗುಡಿಯಲ್ಲಿರುವ ಪಾರ್ವತಿಯತ್ತ ನೋಡುತ್ತಿರುವುದು ವಿಶೇಷ. ಗುಡಿಯನ್ನು ಎಷ್ಟು ಸೂಕ್ಷ್ಮವಾಗಿ ನಿರ್ಮಿಸಲಾಗಿದೆ ಎಂದರೆ ಯಾವ ಕಂಬವೂ ದೇವರಿಗೆ ಎಲ್ಲಿಂದರೂ ಅಡ್ಡವಾಗುವುದಿಲ್ಲ. 
ಬನವಾಸಿಯು ಶಿರಸಿಯಿಂದ 25 ಕಿ.ಮೀ ದೂರದಲ್ಲಿದೆ ಮತ್ತು ಈ ಸ್ಥಳಕ್ಕೆ ಡ್ರೈವ್ ಮಾಡಲು 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಬನವಾಸಿ ಸುಮಾರು 1500 ಕುಟುಂಬಗಳು ಮತ್ತು 6700 ಜನಸಂಖ್ಯೆಯನ್ನು ಹೊಂದಿರುವ ದೊಡ್ಡ ಗ್ರಾಮವಾಗಿದೆ

ಮಧುಕೇಶ್ವರ  ದೇವಾಲಯವು ಅದರ ವಾಸ್ತುಶಿಲ್ಪದ ಸೌಂದರ್ಯತೆ, ಸುಂದರ ಕೆತ್ತನೆಗಳು ಮತ್ತು ಮಾದರಿಗಲು ನಿಮ್ಮನ್ನು ಆಕರ್ಷಿಸುತ್ತದೆ.

ಅಂಕುಶದಿಂದ ತಿವಿದರು ನೆನೆಯುವುದೆನ್ನ ಮನಂ ಬನವಾಸಿ ದೇಶಂ ಎಂದ ದೇಶಪ್ರೇಮಿ ಆದಿ ಕವಿ ಪಂಪನ ಬನವಾಸಿಯನ್ನ ಒಮ್ಮೆಯಾದರೂ ನೋಡಲೇಬೇಕು ವೀಕ್ಷಕರೇ?


ಶಿರಸಿಯಿಂದ ಒಂದು ದಿವಸ ಪ್ರವಾಸ ಮಾಡುವ ಬಯಸುವವರಿಗೆ ಮಾರಿಕಾಂಬ ದೇವಸ್ಥಾನ, ಸಹಸ್ರಲಿಂಗ, ಸೋಂದೇ ಮಠ, ಮಾಗೋಡು ಫಾಲ್ಸ್ ಹಾಗೂ ದೇವಿಮನೆ ಘಾಟ್ , ತುಂಬಾ ಖುಷಿ ಕೊಡುತ್ತದೆ


Post a Comment

0 Comments