ಹರಿಹರ ರ ದೇವಾಲಯ ನೀವೇನಾದರೂ ನೋಡಿಲ್ಲ ಅಂದರೆ, ದಾವಣಗೆರೆ ಜಿಲ್ಲೆ ಹರಿಹರಕ್ಕೆ ಬನ್ನಿ..
ಹರಿಹರದ ಹರಿಹರೇಶ್ವರ ದೇವಾಲಯವು ದಾವಣಗೆರೆ ಜಿಲ್ಲೆಯ ಪ್ರಮುಖ ಪ್ರವಾಸೋದ್ಯಮ ಸ್ಥಳ, ಬೆಂಗಳೂರಿನಿಂದ ಸುಮಾರು 279 ಕಿ.ಮೀ. ದೂರದಲ್ಲಿದ್ದು, ತುಂಗಭದ್ರಾ ನದಿ ದಡದಲ್ಲಿರುವ ಹರಿಹರ ' ದಕ್ಷಿಣ ಕಾಶಿ ' ಎಂದೇ ಪ್ರಖ್ಯಾತಿ ಹೊಂದಿದೆ.
ಈಗ ನೀವು ನೋಡುತ್ತಾ ಇರೋ ಈ ದೇವಾಲಯ ಹರಿಹರೇಶ್ವರ ದೇವಾಲಯ, ಹೊಯ್ಸಳ ಸಾಮ್ರಾಜ್ಯದ ದೊರೆ ವೀರ ನರಸಿಂಹ ದ್ವಿತೀಯನ ಕಾಲದಲ್ಲಿ, ಸುಮಾರು 1223-1224 ಕ್ರಿ.ಶ.ದಲ್ಲಿ, ಅವನ ಸೇನಾಧಿಕಾರಿ ಮತ್ತು ಮಂತ್ರಿ ಪೊಲಾಲ್ವನು ನಿರ್ಮಿಸಿದನು ಎಂದು ನಂಬಲಾಗಿದೆ..
ಹೊಯ್ಸಳ ವಾಸ್ತುಶೈಲಿಯಲ್ಲಿ ನಿರ್ಮಾಣವಾಗಿರುವ ಈ ದೇವಾಲಯ ನಿಮ್ಮನು ಸ್ವಾಗತಿಸುವುದು ಮುಂಭಾಗದಲ್ಲಿರುವ ಎರಡು ಆಕರ್ಷಕ ದೀಪಸ್ತಂಭಗಳು. ಅಧ್ಬುತವಾದ ವಾಸ್ತುಶಿಲ್ಪದ 60 ಸೂಕ್ಷ್ಮ
ಕಲಾಕೃತಿಯ ಕಂಬಗಳು ಹಾಗೂ ಮೇಲ್ಛಾವಣಿಯ ಕೆತ್ತನೆಗಲಂತು ಅತ್ಯದ್ಬುತ. 12 ಮತ್ತು 13 ನೇ ಶತಮಾನಗಳ ಹಳೆಯ ಕನ್ನಡ ಶಾಸನಗಳನ್ನು ಈ ದೇವಾಲಯದಲ್ಲಿ ಕಾಣಬಹುದು
ನಿಮ್ಮನ್ನು ಆಕರ್ಷಿಸುವುದು ದೇವಾಲಯದ ಮುಖ್ಯಭಾಗ, ದೇವಾಲಯದಲ್ಲಿನ ಮೂರ್ತಿ ಶಿವನ ಶರೀರದ ಅರ್ಧ ಭಾಗ ಮತ್ತು ವಿಷ್ಣುವಿನ ದೇಹದ ಅರ್ಧ ಭಾಗದಿಂದ ಕೂಡಿರುವ ಹರಿಹರೇಶ್ವರರ ದರ್ಶನವೇ ಒಂದು ವಿಶೇಷ..
ಪುರಾಣದ ಪ್ರಕಾರ, ಗುಹಾಸುರನೆಂಬ ರಾಕ್ಷಸನ ವಧೆಗಾಗಿ ಹರಿಹರರು ಜೊತೆಗೂಡಿ ಸಂಹಾರ ಮಾಡಿದರು
ನೀವು ದಾವಣಗೆರೆಗೆ ಭೇಟಿ ನೀಡಿದಾಗ, ಹರಿಹರೇಶ್ವರ ದೇವಾಲಯವನ್ನು ನೋಡಲು ಮರೆಯದಿರಿ. ಅದು ನಿಮಗೆ ಅದ್ಭುತ ಅನುಭವ ನೀಡಲಿದೆ.
ಇಲ್ಲಿಯ ಹತ್ತಿರದ ಆಕರ್ಷಕ ದೇಗುಲವೆಂದರೆ ಶ್ರೀ ರಾಘವೇಂದ್ರ ಸ್ವಾಮಿ ಮಠ, 108 ಲಿಂಗೇಶ್ವರ ಸ್ವಾಮಿ ದೇವಸ್ಥಾನ, ವಿಠ್ಠಲ ಮಂದಿರ, ನಾರಾಯಣ ಆಶ್ರಮ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನ.
#harihara #davanagere #ayyappa #karnataka #channagiri #lordshiva #mahaprasadam #devotional
0 Comments