Header Ads Widget

Responsive Advertisement

ಶ್ರೀ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ದೇವಾಲಯ - ಬೆಂಗಳೂರು

ಮನಸ್ಸಿನಲ್ಲಿ ಯಾವುದಾದ್ರೂ ಕಾರ್ಯ ಆಗಬೇಕು ಅಂತ ಅಂದು ಕೊಂಡಿದ್ದರೆ ಭಕ್ತರು ಈ ದೇವಸ್ಥಾನಕ್ಕೆ ಬಂದು ತಮ್ಮ ಕಾರ್ಯವನ್ನು ಸಿದ್ದಿಸಿ ಕೊಳ್ಳೋವ ಪವಿತ್ರ ಕ್ಷೇತ್ರ..

ಬೆಂಗಳೂರಿನ ಗಿರಿನಗರದ ಅವಧುತ ದತ್ತಪೀಠದಲ್ಲಿರುವ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನ


ಕಾರ್ಯ, ಸಂಕಲ್ಪ, ಪ್ರಯತ್ನ ಹಾಗೂ ಸ್ವಾಮಿಯ ಆಶೀರ್ವಾದದಿಂದ, ಕಾರ್ಯ ಸಿದ್ಧಿ ನಿಶ್ಚಿತ ಇದು ಈ ಕ್ಷೇತ್ರದ ನಂಬಿಕೆ.

ಹಲವಾರು ಭಕ್ತರನ್ನ ನೀವಿಲ್ಲಿ ನೋಡಬಹುದು. ತಮ್ಮ ಕಾರ್ಯ ಸಿದ್ಧಿ ಗಾಗಿ ಕಾರ್ಯಸಿದ್ಧಿ ಆಂಜನೇಯ ಸ್ವಾಮಿಯ ಸನ್ನಿಧಾನಕ್ಕೆ ಬಂದು. 

ಪೂರ್ಣಾಫಲ ಅಂದರೆ ತೆಂಗಿನ ಕಾಯಿಯನ್ನು, ಕೌಂಟರ್ ನಲ್ಲಿ ತೆಗೆದುಕೊಂಡು, ಅದರ ಮೇಲೆ ಡೇಟ್ ಮತ್ತು ನಂಬರ್ ಹಾಕಿಸಿಕೊಂಡು ಕಾರ್ಯ ಸಿದ್ಧಿಗಾಗಿ ಆಂಜನೇಯ ಸ್ವಾಮಿಯ ಮುಂದೆ ಕಾರ್ಯ ಸಂಕಲ್ಪ ಮಾಡಿ. 

ಸ್ವಾಮಿಯನ್ನು ಸ್ಮರಿಸುತ್ತಾ ಪೂರ್ಣ ಫಲ ವನ್ನು ನಿಗದಿತ ಸ್ಥಳದಲ್ಲಿ ಹೀಗೆ ಕಟ್ಟಿದಮೇಲೆ ಕಾರ್ಯ ಪ್ರಯತ್ನ ಮಾಡುತ್ತಾರೆ.


ಹದಿನಾರು ದಿನ ದಿನನಿತ್ಯ 108 ಬಾರಿ ಕಾರ್ಯಸಿದ್ಧಿ ಹನುಮನ ಮಂತ್ರವನ್ನು ಪಠಿಸುತ್ತಾ ಇದ್ದು, ಈ ಹದಿನಾರು ದಿನದ ದೀಕ್ಷಾ ಅವಧಿಯಲ್ಲಿ 4 ಬಾರಿ ಕಾರ್ಯಸಿದ್ಧಿ ಹನುಮನಿಗೆ 16 ಬಾರಿ ಪ್ರದಕ್ಷಿಣೆ ಹಾಕಬೇಕು. 

ಹದಿನಾರನೇ (16) ದಿನ ಪೂರ್ಣ ಫಲವನ್ನು ಬಿಚ್ಚಿ ಸ್ವಾಮಿಗೆ ನೈವೇದ್ಯ ಮಾಡಿಸಿ, ಅದೇ ಕಾಯಿಇಂದ ಸಿಹಿ ತಿಂಡಿಯನ್ನು ತಯಾರಿಸಿ ಕೊಂಡು ಮನೆಯವರಿಗೆ, ಬಂದು ಮಿತ್ರರಿಗೆ ಹಂಚಿದರೆ ಶ್ರೀ ಕಾರ್ಯಸಿದ್ಧಿ ಆಂಜನೇಯ ಸ್ವಾಮಿಯ ಅನುಗ್ರಹವಾಗಿ   ತಮ್ಮ ಸಂಕಲ್ಪ  ಈಡೇರುತ್ತದೆ ಎನ್ನುವುದು ಇಲ್ಲಿನ ಭಕ್ತರ ನಂಬಿಕೆ


200 ಟನ್ ತೂಗುವ ಏಕಶಿಲಾ ಆಂಜನೇಯನ ವಿಗ್ರಹವನ್ನು ಹಾಗೂ ಇಲ್ಲಿಯ ಭಕ್ತರು ಎಲೆಯ ಹಾರವನ್ನು ಹಾಕಿರುವುದನ್ನು ನೀವು ನೋಡಬಹುದು..




ನೀವೇನಾದರೂ ಈ ದೇವಸ್ಥಾನಕ್ಕೆ ಬಂದ್ದಿದ್ದ್ದು ಕಾರ್ಯಸಿದ್ದಿಯಾಗಿದ್ದರೆ ಹಾಗೂ ಬೇಟಿ ಮಾಡ್ಬೇಕು ಅಂತಿದ್ರೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ..

Post a Comment

0 Comments