ಕಣಿವೆ ಬಸವೇಶ್ವರ ಚಿಕ್ಕಬಳ್ಳಾಪುರದ ನಂದಿಬೆಟ್ಟದ ಬಳಿ ಇರುವ ಈ ದೇವಸ್ಥಾನ ತನ್ನ ವಿಶಿಷ್ಟವಾದ ನಂದಿ ವಿಗ್ರಹದಿಂದ ಪ್ರಸಿದ್ಧವಾಗಿದೆ.
ಈ ದೇವಸ್ಥಾನವು ಶ್ರೀ ಕಣಿವೆ ಬಸವೇಶ್ವರ ಸ್ವಾಮಿ ದೇವಸ್ಥಾನ ಎಂದೂ ಪ್ರಸಿದ್ಧವಾಗಿದೆ. ಇಲ್ಲಿ ಇರುವ ನಂದಿ ವಿಗ್ರಹವು ಸ್ವಯಂಭೂ (ಸ್ವತಃ ಉದ್ಭವಿಸಿದ) ಎಂದು ನಂಬಲಾಗುತ್ತದೆ.
ಈ ನಂದಿಯ ವಿಗ್ರಹವು ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ ಎಂಬ ನಂಬಿಕೆ ಇದೆ. ಸ್ಥಳೀಯರ ಪ್ರಕಾರ ನಂದಿಯು ಎದ್ದು ನಿಂತು ಕೂಗಿದರೆ ಕಲಿಯುಗದ ಅಂತ್ಯವಾಗುತ್ತದೆ ಎಂಬ ನಂಬಿಕೆಯನ್ನು ಹೊಂದಿದ್ದಾರೆ.
ಈ ದೇವಸ್ಥಾನವು ರೈತ ಸಮುದಾಯದವರಲ್ಲಿ ವಿಶೇಷ ಭಕ್ತಿಯನ್ನು ಹೊಂದಿದೆ. ಸುಗ್ಗಿಯ ಸಮಯದಲ್ಲಿ ರೈತರು ತಮ್ಮ ಬೆಳೆದ ಫಸಲಿನ ಒಂದು ಭಾಗವನ್ನು ಬಸವಣ್ಣನ ಸನ್ನಿಧಿಗೆ ಅರ್ಪಿಸುತ್ತಾರೆ
ನಂದಿ ಬೆಟ್ಟದ ತಳದಿಂದ ೩ ಕಿಮೀ ದೂರದಲ್ಲಿರುವ ಈ ಬಸವಣ್ಣನ ದೇವಸ್ಥಾನದ ಸಮಯ ಬೆಳಿಗ್ಗೆ,೮ ಗಂಟೆ ಯಿಂದ ಸಂಜೆ ೫ ಗಂಟೆಯಇಲ್ಲಿಗೆ ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಇದ್ದು ಕಣಿವೆ ಬಸವೇಶ್ವರ ಸ್ವಾಮಿ,ಭೋಗನಂದೀಶ್ವರ ವಿಶ್ವೇಶ್ವರ ಮ್ಯೂಸಿಯಂ, ರಂಗಸ್ಥಳ ಹಾಗೂ ಇಷಾ ಫೌಂಡೇಶನ್ ಒಂದೇ ದಿವಸದಲ್ಲಿ ಕವರ್ ಮಾಡ್ಬಹುದು.
ನೀವು ಈ ದೇವಸ್ಥಾನಕ್ಕೆ ಭೇಟಿ ಮಾಡಿದ್ದಾರೆ ಅಥವಾ ಬೇಟಿಮಾಡಲು ಪ್ಲಾನ್ ಮಾಡ್ತಾಇದ್ದಾರೆ ಕಾಮೆಂಟ್ ಬಾಕ್ಸನಲ್ಲಿ ನಿಮ್ಮ ಅಭಿಪ್ರಾಯವನ್ನೂ ತಿಳಿಸೋದನ್ನ ಮರೀಬೇಡಿ ವೀಕ್ಷಕರೆ.



0 Comments