Header Ads Widget

Responsive Advertisement

ಭೋಗ ನಂದೀಶ್ವರ ದೇವಾಲಯವು - ಚಿಕ್ಕಬಳ್ಳಾಪುರ

ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದ ತಪ್ಪಲಿನಲ್ಲಿರುವ  ಭೋಗ ನಂದೀಶ್ವರ ದೇವಸ್ಥಾನ, ತನ್ನ ಅದ್ಭುತ ವಾಸ್ತುಶಿಲ್ಪ ಮತ್ತು ಐತಿಹಾಸಿಕ ಮಹತ್ವದಿಂದ ಪ್ರಸಿದ್ಧವಾಗಿದೆ.  ಕೆಲವು ನೋಡಲೇಬೇಕಾದ ವಿಶೇಷಗಳು ಏನಪ್ಪ ಅಂದರೆ..



ನೊಳಂಬ ವಂಶದವರು ಈ ದೇವಾಲಯವನ್ನು ಸುಮಾರು 9ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟಿದ್ದು,

ಈ ದೇವಾಲಯಕ್ಕೆ ಗಂಗರು, ಚೋಳರು, ರಾಷ್ಟ್ರಕೂಟರು, ಹೊಯ್ಸಳರು ಮತ್ತು ವಿಜಯನಗರದ ಅರಸರ ಕೊಡುಗೆಗಳು ಅಪಾರ.

ದೇವಾಲಯವು ದಕ್ಷಿಣ ಭಾರತೀಯ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಾಣಗೊಂಡಿದ್ದು, ದೇವಾಲಯದ ಆವರಣದಲ್ಲಿ ಸುಂದರವಾದ ವಸಂತ ಮಂಟಪಗಳು, ಶಿಲ್ಪಕಲೆಗಳು ಮತ್ತು ಪೌರಾಣಿಕ ದೃಶ್ಯಗಳ ಕೆತ್ತನೆಗಳನ್ನು ಕಾಣಬಹುದು



ಮುಖ್ಯ ದ್ವಾರದಲ್ಲಿ ಭೋಗನಂದೀಶ್ವರ, ಅರುಣಾಚಲೇಶ್ವರ ಮತ್ತು ಉಮಾ ಮಹೇಶ್ವರ ಎಂಬ ಮೂರು ದೇವಾಲಯಗಳನ್ನು ಹೊಂದಿದೆ.

ಅರುಣಾಚಲೇಶ್ವರವು ಶಿವನ ಬಾಲ್ಯವನ್ನು ಪ್ರತಿನಿಧಿಸಿದರೆ, ಭೋಗ ನಂದೀಶ್ವರ ಯೌವನವನ್ನು ಪ್ರತಿನಿಧಿಸುತ್ತದೆ ಮತ್ತು ಬೆಟ್ಟದ ತುದಿಯಲ್ಲಿರುವ ಯೋಗ ನಂದೀಶ್ವರ, ಅಂತಿಮ ತ್ಯಾಗದ ಹಂತವನ್ನು ಪ್ರತಿನಿಧಿಸುತ್ತದೆ ಎಂದು ಹೇಳಲಾಗುತ್ತದೆ.

ನೀವು ನೋಡ್ತಾ ಇರೊ ಈ ಸುಂದರವಾದ ಕಲ್ಯಾಣಿಯನ್ನು ಶೃಂಗಿ ತೀರ್ಥ ಎಂದು ಕರೆಯಲಾಗುತ್ತದೆ.ಈ ಕೊಳವು ದೇವಾಲಯ ಸಂಕೀರ್ಣಕ್ಕೆ ವಿಜಯನಗರ ಕೊಡುಗೆ ಅಪಾರ. 



ಇಲ್ಲಿಗೆ ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಇದ್ದು ಕಣಿವೆ ಬಸವೇಶ್ವರ ಸ್ವಾಮಿ,ಭೋಗನಂದೀಶ್ವರ ವಿಶ್ವೇಶ್ವರ ಮ್ಯೂಸಿಯಂ, ರಂಗಸ್ಥಳ ಹಾಗೂ ಇಷಾ ಫೌಂಡೇಶನ್ ಒಂದೇ ದಿವಸದಲ್ಲಿ ಕವರ್ ಮಾಡ್ಬಹುದು.

ನೀವು ಈ ದೇವಸ್ಥಾನಕ್ಕೆ ಭೇಟಿ ಮಾಡಿದ್ದಾರೆ ಅಥವಾ ಬೇಟಿಮಾಡಲು ಪ್ಲಾನ್ ಮಾಡ್ತಾಇದ್ದಾರೆ ಕಾಮೆಂಟ್ ಬಾಕ್ಸನಲ್ಲಿ ನಿಮ್ಮ ಅಭಿಪ್ರಾಯವನ್ನೂ ತಿಳಿಸೋದನ್ನ ಮರೀಬೇಡಿ ವೀಕ್ಷಕರೆ.

ಸಮಯ:

ಸೋಮವಾರದಿಂದ ಭಾನುವಾರ: ಬೆಳಿಗ್ಗೆ 7:30 ರಿಂದ ಸಂಜೆ 7:001.

ದೂರಗಳು:

ಬೆಂಗಳೂರು ನಗರದಿಂದ: ಸುಮಾರು 54 ಕಿ.ಮೀ2.

ಚಿಕ್ಕಬಳ್ಳಾಪುರದಿಂದ: 6.5 ಕಿ.ಮೀ2.

ನಂದಿ ಬೆಟ್ಟದಿಂದ: 9.5 ಕಿ.ಮೀ2.

Post a Comment

0 Comments