ಇಲ್ಲೊಂದು ಬುದ್ಧನ ಶಾಂತಿ ಸ್ತೂಪ,
ಅನೇಕ ಶಿಲಾಲೇಖನಗಳು ಅಹಿಂಸೆ, ಶಾಂತಿ, ಮತ್ತು ನೀತಿಯ ಸಂದೇಶಗಳನ್ನು ಸಾರುತ್ತವೆ. ಹಾಗಾದ್ರೆ ಯಾವದು ಈ ಶಾಂತಿ ಸ್ತೂಪ ಅಂತೀರಾ ಇದೆ, ಧೌಲಿಗಿರಿ ಪಗೋಡ ಅಥವಾ ಶಾಂತಿ ಸ್ತೂಪ ಒಡಿಶಾ ರಾಜಧಾನಿ ಭುವನೇಶ್ವರದ ದಯಾ ನದಿಯ ದಡದಲ್ಲಿರುವ ಐತಿಹಾಸಿಕ ಸ್ಥಳ .
ಮೌರ್ಯ ಚಕ್ರವರ್ತಿ ಅಶೋಕನಿಂದ ಕಳಿಂಗ ಯುದ್ಧವನ್ನು ಹೋರಾಡಿ ಗೆದ್ದ ಪ್ರದೇಶವೆ ಈ ಧೌಲಿ ಗಿರಿ
ದಂತಕಥೆಯ ಪ್ರಕಾರ, ದಯಾ ನದಿಯ ನೀರು ಭಯಾನಕ ಕಳಿಂಗ ಯುದ್ಧದಲ್ಲಿ ಸತ್ತವರ ರಕ್ತದಿಂದ ಕೆಂಪು ಬಣ್ಣಕ್ಕೆ ತಿರುಗಿತು.
ಕಲಿಂಗ ಯುದ್ಧದ ನಂತರ ಅಶೋಕನು ಬೌದ್ಧ ಧರ್ಮವನ್ನು ಸ್ವೀಕರಿಸಿ, ಅಹಿಂಸೆ ಮತ್ತು ಶಾಂತಿಯ ಮೌಲ್ಯಗಳನ್ನು ಅಂಗೀಕರಿಸಿ ಧರ್ಮದ ಮಾರ್ಗವನ್ನು ಅಳವಡಿಸಿಕೊಂಡದ್ದು ಈ ಬೆಟ್ಟಗಳಲ್ಲಿಯೇ.
ಮೌರ್ಯ ಚಕ್ರವರ್ತಿ ಅಶೋಕನು ಧೌಲಿಗಿರಿಯನ್ನು ಪ್ರಸಿದ್ಧ ಬೌದ್ಧ ಕೇಂದ್ರವನ್ನಾಗಿ ಮಾಡಿದನು. ಧೌಲಿಗಿರಿ ಬೆಟ್ಟಗಳಲ್ಲಿ ಮತ್ತು ಸುತ್ತಮುತ್ತ ಹಲವಾರು ಚೈತ್ಯಗಳು, ಸ್ತೂಪಗಳು ಮತ್ತು ಕಂಬಗಳನ್ನು ನಿರ್ಮಿಸಿದನು. ಧೌಲಿಗಿರಿಯಲ್ಲಿನ ಗಮನಾರ್ಹ ಸ್ಥಳಗಳೆಂದರೆ ಭವ್ಯವಾದ ಈ ಶಾಂತಿ ಸ್ತೂಪ ಮತ್ತು ಹಲವಾರು ಶಾಸನಗಳು.
ನೀವು ನೋಡುತ್ತಾ ಇರುವ ಈ ದೌಲಿಗಿರಿ ಶಾಂತಿ ಸ್ತೂಪವು 1972 ರಲ್ಲಿ ಬೌದ್ಧ ಸಂಘಗಳು ನಿರ್ಮಿಸಿದ ಬೌದ್ಧ ರಚನೆಯಾಗಿದೆ
0 Comments