ಕಾಶಿಯ ಘಾಟ್ ಗಳಲ್ಲಿ ನೋಡಲೇಬೇಕಾಗಿರೋದು ಮಣ್ಣಿಕರ್ಣಿಕ ಘಾಟ್, ಅತ್ಯಂತ ಪವಿತ್ರ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿರುವ ಶ್ಮಶಾನ ಘಾಟ್‌ಗಳಲ್ಲಿ ಒಂದು, ಇಲ್ಲಿ ಅಂತಿುಮ ವಿಧಿಗಳನ್ನು ನೆರವೇರಿಸಿದರೆ ಆತ್ಮಕ್ಕೆ ಮೋಕ್ಷ ಲಭಿಸುತ್ತದೆ ಎಂಬುದು ಭಕ್ತರ ನಂಬಿಕೆ.
ಮಣಿಕರ್ಣಿಕಾ ಘಾಟ್ ುತ್ತರ ಪ್ರದೇಶದ ಕಾಶಿಯ , ಹೆಸರಾಂತ ಶ್ಮಶಾನ . ಈ ಪವಿತ್ರ ಸ್ಥಳದಲ್ಲಿ ದಹನ ವಿಧಿಗಳನ್ನು ನೆರವೇರಿಸುವ ಮೂಲಕ ಜನರು ಜನ್ಮ-ಮರಣ ಚಕ್ರದಿಂದ (ಸಂಸಾರ) ಮುಕ್ತರಾಗುತ್ತಾರೆ .
ಪುರಾಣಗಳ ಪ್ರಕಾರ, ಈ ಸ್ಥಳದಲ್ಲಿ ವಿಷ್ಣುವು ಶಿವ ಮತ್ತು ಪಾರ್ವತಿಗೆ ಸ್ನಾನ ಮಾಡಲು ಕೊಳ ಅಥವಾ ಕುಂಡ ವನ್ನು ತೋಡಿದನು, ಇದನ್ನು ಇಂದು ಮಣಿಕರ್ಣಿಕಾ ಕುಂಡ್ ಎಂದು ಕರೆಯಲಾಗುತ್ತದೆ. ಶಿವನು ಈ ಕೊಳ ದಲ್ಲಿ ಸ್ನಾನ ಮಾಡುವಾಗ, ಅವನ ಕಿವಿಯೋಲೆ (ಮಣಿಕರ್ಣ) ಕುಂಡ್ ದಲ್ಲಿ ಬಿತ್ತು. ಈ ಘಟನೆಯಿಂದ ಈ ಸ್ಥಳವನ್ನು ಮಣಿಕರ್ಣಿಕಾ ಘಾಟ್ ಎಂದು ಕರೆಯಲಾಗುತ್ತದೆ. ಈ ಕುಂಡವು ಗಂಗಾ ನದಿಯೊಂದಿಗೆ ವಿಲೀನವಾಯಿತು ಎಂದು ಭಕ್ತರು ನಂಬುತ್ತಾರೆ.
ಮಣಿಕರ್ಣಿಕಾ ಘಾಟ್ ನಲ್ಲಿ 24 ಗಂಟೆಗಳ ಕಾಲ ನಿರಂತರ ವಾಗಿ ಚಿತಾ ಅಗ್ನಿಗಳಿಗೆ ಪ್ರಸಿದ್ಧವಾಗಿದೆ. ಈ ಚಿತೆಗಳು ಯಾವಾಗಲೂ ಉರಿಯುತ್ತಲೇ ಇರುತ್ತವೆ ಮತ್ತು ಎಂದಿಗೂ ನಿಲ್ಲುವುದಿಲ್ಲ. ಈ ಕಾರಣದಿಂದ ಈ ಘಾಟ್ ಅನ್ನು **ಮಹಾಶಂಶಾನ** (ಮಹಾ ಶ್ಮಶಾನ) ಎಂದು ಕರೆಯಲಾಗುತ್ತದೆ.
0 Comments