🌟 ಆಜಾನುಬಾಹು! ಕಮಲದ ಕಣ್ಣುಗಳು, ಸಿಂಹದ ಮುಖದ ಬಲಿಷ್ಠ ರೂಪ, ಸುಂದರ ವಸ್ತ್ರಧಾರಿ,ಶಕ್ತಿಯ, ಧೈರ್ಯದ, ಮತ್ತು ಭಕ್ತಿಯ ಪ್ರತೀಕ. 36 ಅಡಿ ಎತ್ತರದ ಏಕಶಿಲಾ ಹನುಮಂತ ಮೂರ್ತಿ— ಇದು ದಕ್ಷಿಣ ಭಾರತದ ಅತ್ಯಂತ ಎತ್ತರದ ಏಕಶಿಲಾ ಹನುಮಂತ ಮೂರ್ತಿ!
🙏 ಬೆಂಗಳೂರು ಅರಶಿನಕುಂಟೆ ಶ್ರೀ ಅಂಜನೇಯಸ್ವಾಮಿ ದೇವಸ್ಥಾನ–ತುಮಕೂರು ಹೆದ್ದಾರಿಯ ದಾಸನಪುರದ ಬಳಿ, ಶಕ್ತಿಯ ಪ್ರತೀಕವಾಗಿ ಭಕ್ತರಲ್ಲಿ ಧೈರ್ಯ ಮತ್ತು ಶ್ರದ್ಧೆ ತುಂಬಿಸುವ ಪವಿತ್ರ ಸ್ಥಳ.
🚇 ಮೆಟ್ರೋ ಮತ್ತು 🚌 BMTC ಬಸ್‌ಗಳ ಮೂಲಕ ಸುಲಭವಾಗಿ ತಲುಪಬಹುದಾದ ಈ ದೇವಸ್ಥಾನ, ನಿಮ್ಮ ಆತ್ಮಶಕ್ತಿ ಹೆಚ್ಚಿಸುತ್ತದೆ.
📸 ಧೈರ್ಯ, ಶ್ರದ್ಧೆ, ಮತ್ತು ಶಕ್ತಿ ತುಂಬಿದ ಈ ಪವಿತ್ರ ಸ್ಥಳವನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಅವರಿಗೂ ಕೂಡ ಹೆಲ್ಪ್ ಆಗಬಹುದು, ಈ ಪೇಜ್‌ನ್ನು ಫಾಲೋ ಮಾಡೋದು ಮರೆಯಬೇಡಿ
⏰ ಭೇಟಿ ಸಮಯ (Visiting Hours)
ಸೋಮವಾರ–ಶುಕ್ರವಾರ |
ಬೆಳಿಗ್ಗೆ 8:30 – ಮಧ್ಯಾಹ್ನ 12:30 |
ಸಂಜೆ 4:30 – ರಾತ್ರಿ 8:30 |
ಶನಿವಾರ–ಭಾನುವಾರ | ಬೆಳಿಗ್ಗೆ 8:30 – ರಾತ್ರಿ 8:30 |
🚗 ಸೌಲಭ್ಯಗಳು (Facilities)
- ಪಾರ್ಕಿಂಗ್: ಎರಡು ಚಕ್ರ ಮತ್ತು ನಾಲ್ಕು ಚಕ್ರ ವಾಹನಗಳಿಗೆ ಲಭ್ಯ
- Wheelchair Accessibility: ಲಭ್ಯವಿಲ್ಲ
- ಹತ್ತಿರದ ದೇವಾಲಯಗಳು: ಮುಕ್ತಿನಾಥೇಶ್ವರ ಸ್ವಾಮಿ, ಶ್ರೀ ಭೀಮೇಶ್ವರ ಸ್ವಾಮಿ, ಶ್ರೀ ಉದ್ಭವ ಗಣೇಶ ದೇವಾಲಯ
📍 ಸ್ಥಳ ಮಾಹಿತಿ (Location)
- ವಿಳಾಸ: 3CHF+QQ8, ವೀರಯ್ಯನಗರ, ಅರಶಿನಕುಂಟೆ, ದಾಸನಪುರ, ಬೆಂಗಳೂರು, ಕರ್ನಾಟಕ 562123
0 Comments