Header Ads Widget

Responsive Advertisement

ಶ್ರೀ ಕಾಮಧೇನು ಕ್ಷೇತ್ರವು ಬೆಂಗಳೂರಿನಲ್ಲಿರುವ ಮಿನಿ ಮಂತ್ರಾಲಯ ರಾಘವೇಂದ್ರ ಸ್ವಾಮಿ ದೇವಸ್ಥಾನ.

ಬೆಂಗಳೂರಿನ ಮಾಗಡಿ  ರಸ್ತೆಯ ಕಡಬಗೇರೆಯ ಬಳಿ ಇರುವ ಶ್ರೀ ಕಾಮಧೇನು ಕ್ಷೇತ್ರ ಎಂದೇ ಪ್ರಸಿದ್ಧಿ ಹೊಂದಿರುವ ಪವಿತ್ರ ರಾಘವೇಂದ್ರ ಸ್ವಾಮಿ ದೇವಸ್ಥಾನ. ಈ ಕ್ಷೇತ್ರ "ಮಿನಿ ಮಂತ್ರಾಲಯ"   ಎಂದೇ ಪ್ರಸಿದ್ಧಿ ಏಕೆಂದರೆ ಇಲ್ಲಿ ಮಂತ್ರಾಲಯದ ಅನುಭವವನ್  ಪಡೆಯಬಹುದು. 

ಇಲ್ಲಿ ಮುಖ್ಯವಾಗಿ ನೀವು ನೋಡಬಹುದು ಭಕ್ತರು ತಮ್ಮ ಮನಸ್ಸಿನ ಹರಕೆಗಳನ್ನು ತಪ್ಪದ ದೀಪ ಸೇವೆ ಯ ರೂಪದಲ್ಲಿ  ಗುರು ರಾಯರಿಗೆ ಅರ್ಪಿಸುತ್ತಿರುವುದು. 

📚  ಲಕ್ಷಾಂತರ “ಶ್ರೀ ರಾಘವೇಂದ್ರಾಯ ನಮಃ” ಎಂಬ ನಾಮಲಿಖಿತ ಪುಸ್ತಕಗಳಿಂದ ನಿರ್ಮಿತ ವಾದ  ಪುಸ್ತಕ ಬೃಂದಾವನ 

🔱 ಶುದ್ಧ  ಸಾಲಿಗ್ರಾಮ ಶಿಲೆಯಿಂದ ನಿರ್ಮಿತ ಭುವರಾಹಾ ಮುಖ್ಯಪ್ರಾಣ ಶ್ರೀ ರಾಘವೇಂದ್ರ ಸ್ವಾಮಿ ಯವರ  ಬೃಂದಾವನ,

ಅನ್ನದಾನ ಸೇವೆ: ಗುರುವಾರ ಮತ್ತು ಭಾನುವಾರ ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 3:30 ರವರೆಗೆ ಉಚಿತ ಅನ್ನದಾನ. 

BMTC ಬಸ್‌ಗಳ ಮೂಲಕ ಸುಲಭವಾಗಿ ತಲುಪಬಹುದಾದ ಈ ಕ್ಷೇತ್ರ, ನಿಮ್ಮ ಆತ್ಮಶಕ್ತಿ ಹೆಚ್ಚಿಸುತ್ತದೆ.

🌟 ಈ ಪವಿತ್ರ ಸ್ಥಳವನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ. ಅವರಿಗೂ ಈ ದೈವಿಕ ಅನುಭವ ಲಭ್ಯವಾಗಲಿ. ಈ ಪೇಜ್‌ನ್ನು ಫಾಲೋ  ಮಾಡೋದನ್ನ ಮರೀಬೇಡಿ 

📍 ಸ್ಥಳ: ವಡ್ಡರಹಳ್ಳಿ, ಕಡಬಗೇರೆ ಹೋಬಳಿ, ಬೆಂಗಳೂರು  
🕉️ ದರ್ಶನದ ದಿನ: ಗುರುವಾರದಂದು ಭಕ್ತರ ಹೆಚ್ಚಿನ ಪ್ರವಾಹವಿರುತ್ತದೆ

ದೇವಾಲಯದ ಸಮಯಗಳು:  
- ಸೋಮ–ಶುಕ್ರವಾರ: ಬೆಳಿಗ್ಗೆ 8:30 – ಸಂಜೆ 5:30  
- ಭಾನುವಾರ: ಬೆಳಿಗ್ಗೆ 8:00 – ಸಂಜೆ 7:30  
- ಗುರುವಾರ: ಬೆಳಿಗ್ಗೆ 6:30 – ರಾತ್ರಿ 8:30



🚌 ಮಜೆಸ್ಟಿಕ್ (ಕೆಂಪೇಗೌಡ ಬಸ್ ನಿಲ್ದಾಣ)ದಿಂದ ಕಡಬಗೇರೆಯ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ BMTC ಬಸ್ ಮಾಹಿತಿ:

🛑 ಎಲ್ಲಿ ಹತ್ತಬೇಕು?
- ಪ್ಲಾಟ್‌ಫಾರ್ಮ್ 21 ರಿಂದ 24 (ಮಜೆಸ್ಟಿಕ್‌ನಲ್ಲಿ ಮಾಗಡಿ ರಸ್ತೆಯ ಕಡೆಗೆ ಹೋಗುವ ಬಸ್‌ಗಳು)

🚏 ಬಸ್ ಸಂಖ್ಯೆ:
- 245MA – ಕಡಬಗೇರಿ ಕ್ರಾಸ್ ಮೂಲಕ ಹೋಗುತ್ತದೆ  
- 245G – ಜನಪ್ರಿಯ ಟೌನ್‌ಶಿಪ್ ಕಡೆ, ಕಡಬಗೇರಿ ಕ್ರಾಸ್ ಮೂಲಕ  
- 242FB, 242B, 245Q, 245J, 245K – ಇವು ಕೂಡ ಕಡಬಗೇರಿ ಅಥವಾ ಹತ್ತಿರದ ಪ್ರದೇಶಗಳಿಗೆ ಹೋಗುವ ಬಸ್‌ಗಳು

🕒 245MA ಬಸ್ ಸಮಯ:
- ಬೆಳಿಗ್ಗೆ 10:55  
- ಮಧ್ಯಾಹ್ನ 2:00  
- ಸಂಜೆ 5:10  
- ರಾತ್ರಿ 8:50  

ದೂರ: ~25 ಕಿ.ಮೀ  
ಪ್ರಯಾಣ ಸಮಯ: ಸುಮಾರು 1 ಗಂಟೆ 20 ನಿಮಿಷ

🛕 ಹತ್ತಿರದ ನಿಲ್ದಾಣ:
- ಕಡಬಗೇರಿ ಕ್ರಾಸ್ ಅಥವಾ ಗಣೇಶ ಸರ್ಕಲ್ (ಇಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಮಠವಿದೆ)

Post a Comment

0 Comments