Header Ads Widget

Responsive Advertisement

ಪ್ರಯಾಗರಾಜ್ - ಮಾಘ್ ಮೇಳ 2026 - ಧಾರ್ಮಿಕ ಮಹತ್ವ ಮತ್ತು ಪ್ರಮುಖ ಸ್ನಾನ ದಿನಗಳು

ಮಾಘ್ ಮೇಳ 2026 —ಪ್ರಮುಖ ದಿನಾಂಕಗಳು ಮತ್ತ್ತು  ಪವಿತ್ರ  ಸ್ನಾನಗಳ  ದಿನಗಳು

2026 ರ ಮಾಘ್ ಮೇಳ  ಪ್ರಯಾಗರಾಜ್ (ತ್ರಿವೇಣಿ  ಸಂಗಮ) ನಲ್ಲಿ 3 ಜನವರಿ 2026ರಿಂದ 15 ಫೆಬ್ರವರಿ 2026 ರವರೆಗೆ 44 ದಿನಗಳ ಉತ್ಸವ ರೂಪದಲ್ಲಿ ನಡೆಯುತ್ತಿದೆ. 

ಮೇಳದ ಆಚರಣೆ ಮತ್ತು ಅನುಭವ

ಮಾಘ್ ಮೇಳವು ಧಾರ್ಮಿಕ ಭಾವನೆಗಳಿಂದ ತುಂಬಿರುವ ಮಹಾ ಉತ್ಸವ. ಲಕ್ಷಾಂತರ ಭಕ್ತರು  ಗಂಗಾ, ಯಮುನಾ ಮತ್ತು ಸಾರಸ್ವತೀ ನದಿಗಳ ಸಂಗಮದಲ್ಲಿ ಸ್ನಾನ ಮಾಡುವುದರಿಂದ ಪಾಪ ಪರಿಹಾರವಾಗುತ್ತದೆ ಮತ್ತು ಮೋಕ್ಷದ ಮಾರ್ಗ ಆರಂಭವಾಗುತ್ತದೆ ಎಂಬ.ಭಕ್ತರಲ್ಲಿ ನಂಬಿಕೆ .

ಪ್ರಯಾಗರಾಜ್ -   ಮಾಘ್ ಮೇಳ 2026 - ಪ್ರಮುಖ ಸ್ನಾನ ದಿನಗಳು

ಮುಖ್ಯಾಂಶಗಳು

- ಸಂಗಮ ಸ್ನಾನ:ಗಂಗಾ, ಯಮುನಾ, ಸಾರಸ್ವತೀ ನದಿಗಳ ತೀರದಲ್ಲಿ ಸ್ನಾನವು ಪಾಪ ಪರಿಹಾರ ಮತ್ತು ಮೋಕ್ಷದ ದಾರಿ. 
ಭಕ್ತಿ ವಿಧಿಗಳು : ಪೂಜೆ, ಮಂತ್ರಪಠಣ, ಸಂಕೀರ್ತನೆ, ಭಕ್ತಿಗೀತೆಗಳ ಮೂಲಕ ಧಾರ್ಮಿಕ ಅನುಭವ.  
ಸಾಂಸ್ಕೃತಿಕ ವೈಭವ : ಮೆರವಣಿಗೆಗಳು, ಕಲಾ-ಸಂಸ್ಕೃತಿ ಕಾರ್ಯಕ್ರಮಗಳು, ತಾತ್ವಿಕ ಚರ್ಚೆಗಳು.  
- ಆಧ್ಯಾತ್ಮಿಕ ನಂಬಿಕೆ : ಸಂಸಾರ ಚಕ್ರದಿಂದ ಮುಕ್ತಿ ಪಡೆಯಲು ಸಹಾಯಕವೆಂದು ಭಕ್ತರು ನಂಬಿಕೆ ಇಟ್ಟುಕೊಂಡಿರುವುದು.  
ಸಂಪ್ರದಾಯದ ನಿರಂತರತೆ : ಹಳೆಯ ಸಂಪ್ರದಾಯಗಳು ಇಂದಿಗೂ ಶ್ರದ್ಧೆಯಿಂದ ಆಚರಿಸಲಾಗುತ್ತಿವೆ.  

ಮಾಘ್ ಮೇಳದಲ್ಲಿ  ಅತ್ಯಂತ ಶುಭ ದಿನಗಳು 

- ಪೌಷ ಪೂರ್ಣಿಮಾ — 3 ಜನವರಿ 2026 
- ಮಕರ ಸಂಕ್ರಾಂತಿ — 14/15 ಜನವರಿ 2026  
- ಮೌನೀಅ ಮಾವಾಸ್ಯಾ — 18 ಜನವರಿ 2026  
- ವಸಂತ ಪಂಚಮಿ — 23 ಜನವರಿ 2026  
- ಮಾಘಿ ಪೂರ್ಣಿಮಾ — 1 ಫೆಬ್ರವರಿ 2026  
- ಮಹಾಶಿವರಾತ್ರಿ — 15 ಫೆಬ್ರವರಿ 2026

ಮಾಘ್ ಮೇಳವು ಕೇವಲ ಉತ್ಸವವಲ್ಲ, ಅದು ಭಕ್ತಿ, ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಚಿಂತನೆಯ ಮಹಾ ಸಮಾಗಮ.


Post a Comment

0 Comments