Header Ads Widget

Responsive Advertisement

ಶ್ರೀ ಮಾರಿಕಾಂಬಾ ದೇವಿ ದೇವಾಲಯ - ಸಿರ್ಸಿ


ಸಿರ್ಸಿ ಯಲ್ಲಿರುವ ಶ್ರೀ ಮಾರಿಕಾಂಬಾ ದೇವಾಲಯ ದುರ್ಗಾ ದೇವಿಯ ಅವತಾರವೆಂದು ಹಾಗೂ ಮಾರಿಗುಡಿ ಅಥವಾ ದೊಡ್ಡಮ್ಮನ ದೇವಾಲಯವೆಂದು ಕರೆಯುತ್ತಾರೆ.


ದೇವಾಲಯದ ಪ್ರವೇಶ ದ್ವಾರದಿಂದ ಹಿಡಿದು ಕೊನೆಯವರೆಗೂ ಗೋಡೆಗಳ ಮೇಲೆ ಕೆಂಪು ಬಣ್ಣದಿಂದ ಪುರಾತನ ಕಥೆಗಳನ್ನು ಬರೆಯಲಾಗಿದೆ

ದೇವಾಲಯದ ಮುಂಭಾಗದಲ್ಲಿ   ಶ್ರೀ ಮಹಾಗಣಪತಿ, ಈಶ್ವರ ಮತ್ತು ಹನುಮಂತನ ಸಣ್ಣ ದೇವಾಲಯಗಳು ನೋಡಬಹುದು.

ನೀವು ನೋಡ್ತಾ ಇರೋ ಈ ದೇವಾಲಯವು 1688ರಲ್ಲಿ ನಿರ್ಮಿಸಲಾಗಿದ್ದು,  ನೀವು ಮುಖ್ಯದ್ವಾರದ ಪ್ರವೇಶಿಸಿದ ನಂತರ, ಮಧ್ಯದಲ್ಲಿ ಅಂಗಳ,  ಅದರ ಸುತ್ತಲೂ ಮಠಗಳಿವೆ. ಮಠಗಳು ಹಿಂದೂ ಮಹಾಕಾವ್ಯಗಳ ದೇವತೆಗಳ ಚಿತ್ರಗಳಿಂದ ತುಂಬಿವೆ. 

ಈ ದೇವಾಲಯದಲ್ಲಿ ಕಾವಿ ಕಲೆಯಲ್ಲಿ ಭಿತ್ತಿಚಿತ್ರಗಳ ವಿಶೇಷ ವರ್ಣಚಿತ್ರಗಳನ್ನು ಕಾಣಬಹುದು ಹಾಗೂ ಇದು ಕರ್ನಾಟಕದ ಕರಾವಳಿ ಕೊಂಕಣ ಪ್ರದೇಶದಲ್ಲಿ ಜನಪ್ರಿಯ ಕಲಾ ಪ್ರಕಾರ.

ಗರ್ಭಗುಡಿಯು ದುರ್ಗಾ ದೇವಿಯ ಉಗ್ರ ರೂಪದ  ಎಂಟು ಭುಜಗಳ ಹುಲಿಯ ಮೇಲೆ ಸವಾರಿ ಮಾಡಿ ರಾಕ್ಷಸನನ್ನು ಕೊಲ್ಲುತ್ತಿರುವ ಮಾರಿಕಾಂಬ ದೇವಿ ದರ್ಶನ, ಇಲ್ಲಿ ಮಾರಿಕಾಂಬ ದೇವಿಯನ್ನು  ರೇಣುಕ  ಮತ್ತು ಯೆಲ್ಲಮ್ಮ ಎಂದೂ ಕರೆಯಲಾಗುತ್ತದೆ. 


ಶಿರಸಿ ಮಾರಿಕಾಂಬಾ ದೇವಸ್ಥಾನದ ಜಾತ್ರಾ ಮಹೋತ್ಸವವು ವಿಶ್ವ ಪ್ರಸಿದ್ಧವಾಗಿದ್ದು, ಈ ಜಾತ್ರೆಯು ಕರ್ನಾಟಕದ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದಾಗಿದ್ದು, ಭಕ್ತರು ದೇಶ ವಿದೇಶಗಳಿಂದ ಈ ದೇವಾಲಯಕ್ಕೆ ಆಗಮಿಸುತ್ತಾರೆ. ಇದು ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುತ್ತದೆ.  

ಈ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಮತ್ತೊಂದು ಕಥೆಯನ್ನು ಕೂಡ ಹೇಳಲಾಗಿದೆ. ಸುಂದರ ಬ್ರಾಹ್ಮಣ ಯುವತಿಯನ್ನು ಅನ್ಯ ಜಾತಿಯ ಯುವಕನೋರ್ವ ವಿವಾಹವಾಗುವ ಬಯಕೆಯಿಂದ ಮಾಂಸಾಹಾರವನ್ನು ತ್ಯಜಿಸಿ, ಬ್ರಾಹ್ಮಣರಂತೆ ಮಂತ್ರ, ಪೂಜೆಯನ್ನು ಕಲಿತು ಬ್ರಾಹ್ಮಣ ಮುಖವಾಡವನ್ನು ಹಾಕಿಕೊಂಡ. ಈತನನ್ನು ಶುದ್ಧ ಬ್ರಾಹ್ಮಣನೆಂದು ತಿಳಿದ ಆ ಸುಂದರ ಬ್ರಾಹ್ಮಣ ಯುವತಿಯು ಆತನನ್ನು ವಿವಾಹವಾಗುತ್ತಾಳೆ. ಆದರೆ, ಒಂದು ದಿನ ಅನ್ಯ ಜಾತಿಯ ಯುವಕನಿಗೆ ಮಾಂಸಾಹಾರವನ್ನು ಕಂಡು ತಿನ್ನಬೇಕೆಂದು ಆಸೆಯಾಗಿ ತಿನ್ನುತ್ತಾನೆ. ಇದನ್ನು ತಿಳಿದ ಆತನ ಬ್ರಾಹ್ಮಣ ಪತ್ನಿಯು ಆತನ ರುಂಡವನ್ನು ಕತ್ತರಿಸಿ, ಇಡೀ ಮನೆಗೆ ಬೆಂಕಿ ಹಚ್ಚಿ, ತಾನು ಕೂಡ ಪತಿಯೊಂದಿಗೆ ಬೆಂಕಿಯಲ್ಲಿ ಆಹುತಿಯಾಗುತ್ತಾಳೆ. ಈಕೆಯ ಧರ್ಮ ನಿಷ್ಠೆಯನ್ನು ನೋಡಿದ ಊರಿನವರು ಆಕೆಯನ್ನು ದುರ್ಗೆಯ ಅವತಾರ ಎಂದು ಪೂಜಿಸಲು ಆರಂಭಿಸಿದರೆನ್ನುವ ಕಥೆಯೂ ಇದೆ.

ಈಗ ಕೋಣ ಬಲಿಯನ್ನು ಇಲ್ಲಿ ನಿಷೇಧಿಸಲಾಗಿದ್ದು, ಕೋಣವನ್ನು ಬಲಿ ಕೊಡುವ ಬದಲು ಬೂದುಕುಂಬಳಕಾಯಿಯನ್ನು ಒಡೆಯುವ ಪದ್ಧತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಶಿರಸಿಯಿಂದ ಒಂದು ದಿವಸ ಪ್ರವಾಸ ಮಾಡುವ ಬಯಸುವವರಿಗೆ  ಬನವಾಸಿ, ಸಹಸ್ರಲಿಂಗಸೋಂದೇ ಮಠ, ಮಾಗೋಡು ಫಾಲ್ಸ್ ಹಾಗೂ ದೇವಿಮನೆ ಘಾಟ್ , ತುಂಬಾ ಖುಷಿ ಕೊಡುತ್ತದೆ.

ವಿಳಾಸ
ಸಿರ್ಸಿ-ಬನವಾಸಿ ರಸ್ತೆ, 
ಸಿರ್ಸಿ, 
ಕರ್ನಾಟಕ 581401

ದೇವಾಲಯದ ಪ್ರವೇಶ ಸಮಯವು 
ಸೋಮವಾರದಿಂದ ಭಾನುವಾರದವರೆಗೆ
ಬೆಳಿಗ್ಗೆ 06:00 ರಿಂದ ರಾತ್ರಿ 21:00 ರವರೆಗೆ ಇರುತ್ತದೆ. 








Photo Source: Temple website. 

Post a Comment

0 Comments