ನೀವು ನೋಡ್ತಾ ಇರೋದು ಕರ್ನಾಟಕದ ಪ್ರಮುಖ ನದಿಗಳಲ್ಲೊಂದಾದ ಶರಾವತಿ ನದಿ. ಈ ಶರಾವತಿ ತೂಗು ಸೇತುವೆಯನ್ನ ನೀವು ಹೊನ್ನವರದಿಂದ ಜೋಗ್ಫಾಲ್ಸ್ಗೆ ಹೋಗ್ಬೇಕಾದ್ರೆ ನೋಡಬಹುದು.
ಈ ತೂಗು ಸೇತುವೆ ಶರಾವತಿ ನದಿಯ ಮೇಲೆ ಕುದ್ರೀಗಿಯಿಂದ ಉಪ್ಪೋನಿ ಸಂಪರ್ಕ ಕಲ್ಪಿಸುವ ಪ್ರಮುಖ ಸೇತುವೆಯಾಗಿದೆ.
ಸೇತುವೆ ತುಂಬಾ ಉದ್ದ ಮತ್ತು ಎತ್ತರವಾಗಿದ್ದು, ಅಗಲ ಸ್ವಲ್ಪ ಕಮ್ಮಿ, ಎರಡು ಬೈಕುಗಳು ಹೋಗೋ ಅಷ್ಟು ಅಗಲ ಇದೆ. ಇದರ ಮೇಲೆ ಟೂ ವೀಲರ್ ಓಡಿಸೋದು ಏಷ್ಟು ಸೂಕ್ತನೋ ಗೊತ್ತಿಲ್ಲ.
ಸೇತುವೆಯು ಪ್ರವಾಸಿಗರ ಕಣ್ಣಿಗೆ ಭಾರೀ ಕುತೂಹಲದ ಟೂರಿಸ್ಟ್ ಸ್ಥಳವಾಗಿದ್ದು, ನೂರಾರು ಜನರು ಸೇತುವೆಯ ಮೇಲಿಂದ ಶರಾವತಿ ನದಿಯ ಸುತ್ತಲಿನ ಸುಂದರ ದೃಶ್ಯಗಳನ್ನ ತಮ್ಮ ಕ್ಯಾಮೆರಾ ಕಣ್ಣಲಿ ಸೆರೆ ಹಿಡಿಯೋದನ್ನ ನೀವು ನೋಡಬಹುದು.
ಬೋಟಿಂಗ್ ವ್ಯವಸ್ಥೆ ಕೂಡಾ ಇದ್ದು, ನೀವು ಶರಾವತಿ ನದಿಯನ್ನ ಒಂದು ಸಿಂಪಲ್ ರೌಂಡ್ ಹಾಕಬಹುದು..
ಕುದ್ರೀಗಿಯಿಂದ ಉಪ್ಪೋನಿಗೆ ಸಂಪರ್ಕ ಕಲ್ಪಿಸುವ ಈ ಸೇತುವೆ, ಪ್ರವಾಸೋದ್ಯಮಕ್ಕೆ ಹೆಚ್ಚು ಲಾಭವನ್ನು ನೀಡತಾಇದೆ.
ನೀವು ತೂಗು ಸೇತುವೆಯನ್ನ ನೋಡಿದ್ರೆ ಅಥವಾ ನೋಡ್ಬೇಕು ಅಂಥ ಅಂದುಕೊಂಡಿದ್ರೆ ಕಾಮೆಂಟ್ ಬಾಕ್ಸ್ ನಲ್ಲಿ ಶೇರ್ ಮಾಡ್ ಬಹುದುು ವೀಕ್ಷಕರೇ..
0 Comments