ಚಿಕ್ಕಬಳ್ಳಾಪುರ ಇಶಾ ಫೌಂಡೇಶನ್ ವತಿಯಿಂದ ನಿರ್ಮಿಸಿರುವ 112 ಅಡಿ ಎತ್ತರದ ಆದಿಯೋಗಿ ಸಧ್ಯಗುರು ಅವರ ಮಾರ್ಗದರ್ಶನದಲ್ಲಿ ಸ್ಥಾಪಿಸಲ್ಪಟ್ಟಿದ್ದು, ಶಿವನನ್ನು ಪ್ರತಿನಿಧಿಸುತ್ತಾ ಸಪ್ತರ್ಷಿಗಳಿಗೆ ಯೋಗದ ಜ್ಞಾನವನ್ನು ನೀಡಿದಂತಹ ಮೊದಲ ಯೋಗ ಗುರು.
ನೀವು ನೋಡ್ತಾ ಇರೊ 112 ಅಡಿ ಎತ್ತರದ ಆದಿಯೋಗಿ ಮಾನವ ಕಲ್ಯಾಣ ಮತ್ತು ಪರಿಪೂರ್ಣತೆಯನ್ನು ಸಾಧಿಸಲು ಸಹಾಯ ಮಾಡುವ 112 ಮಾರ್ಗಗಳನ್ನು ಪ್ರತಿನಿಧಿಸುತ್ತಿವೆ ಹಾಗೂ ಆಂತರಿಕ ಶಾಂತಿಯನ್ನು ಹುಡುಕುವ ಸಾವಿರಾರು ಜನರನ್ನು ಆಕರ್ಷಿಸುತ್ತಿದ
ಈಶಾ ಫೌಂಡೇಶನ್‌ನ ಭಾಗವಾಗಿ, ಆದಿಯೋಗಿ ಪ್ರಾಚೀನ ಯೋಗದ ಅಭ್ಯಾಸವನ್ನು ಪ್ರಚಾರ ಮಾಡುವ ಆಧ್ಯಾತ್ಮಿಕ ಕೇಂದ್ರವಾಗಿದ್ದು , ಅದರ ಲಾಭಗಳನ್ನು ಜಾಗತಿಕ ಪ್ರೇಕ್ಷಕರಿಗೆ ತಲುಪಿಸುತ್ತಿದೆ.
ಅದಿಯೋಗಿ ಪ್ರತಿಮೆಯ ಬಳಿ ಯೋಗೇಶ್ವರ ಲಿಂಗವನ್ನು ಸ್ಥಾಪಿಸಲಾಗಿದ್ದು, ಇದು ಮಾನವ ಶರೀರದ ಪ್ರಮುಖ ಚಕ್ರಗಳನ್ನು ಪ್ರತಿನಿಧಿಸುತ್ತದೆ
ಇಲ್ಲಿ ಯೋಗ ಸಂಧ್ಯಾ, ಸಮರ್ಪಣೆ, ಜಲ ಅರ್ಪಣೆ, ಮಾಲಾ ಅರ್ಪಣೆ, ದೀಪ ಅರ್ಪಣೆ, ಮತ್ತು ಕ್ಲೇಶ ನಾಶನ ಕ್ರಿಯೆ ಸೇರಿದಂತೆ ಹಲವಾರು ಆಧ್ಯಾತ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.
ಪ್ರತಿದಿನ ಸಂಜೆ 7:00 ಗಂಟೆಗೆ ನಡೆಯುವ ಲೇಸರ್ ಶೋ ಅತ್ಯಂತ ಆಕರ್ಷಕವಾಗಿದೆ. ಈ 14 ನಿಮಿಷದ 3D ಲೇಸರ್ ಶೋವು ಆದಿಯೋಗಿ ಯೋಗ ವಿಜ್ಞಾನವನ್ನು ಮಾನವಕುಲಕ್ಕೆ ಹೇಗೆ ನೀಡಿದರೆಂಬುದನ್ನು ಚಿತ್ರಿಸುತ್ತದೆ. ಈ ದೃಶ್ಯ ವೈಭವವನ್ನು ಸದ್ಗುರು ಅವರ ಧ್ವನಿಯಲ್ಲಿ ನಿರೂಪಣೆ ಮಾಡಲಾಗುತ್ತದೆ1.
ಇಲ್ಲಿಗೆ ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಇದ್ದು ಕಣಿವೆ ಬಸವೇಶ್ವರ ಸ್ವಾಮಿ,ಭೋಗನಂದೀಶ್ವರ ವಿಶ್ವೇಶ್ವರ ಮ್ಯೂಸಿಯಂ, ರಂಗಸ್ಥಳ ಹಾಗೂ ಇಷಾ ಫೌಂಡೇಶನ್ ಒಂದೇ ದಿವಸದಲ್ಲಿ ಕವರ್ ಮಾಡ್ಬಹುದು.
ನೀವು ಇಷಾ ಫೌಂಡೇಶನ್‌ನ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೀರಾ? ಭಾಗವಹಿಸಲು ಪ್ಲಾನ್ ಮಾಡ್ತಾಇದ್ದಾರೆ ಕಾಮೆಂಟ್ ಬಾಕ್ಸನಲ್ಲಿ ನಿಮ್ಮ ಅಭಿಪ್ರಾಯವನ್ನೂ ತಿಳಿಸೋದನ್ನ ಮರೀಬೇಡಿ ವೀಕ್ಷಕರೆ.
ದೂರಗಳು:
ಬೆಂಗಳೂರು ನಗರದಿಂದ: ಸುಮಾರು 70 ಕಿ.ಮೀ2



0 Comments