ಬೆಂಗಳೂರು ನಗರದಿಂದ ಕೇವಲ 18 ಕಿಲೋಮೀಟರ್ ದೂರದಲ್ಲಿರುವ ಹೆಸರಘಟ್ಟಾ ಕೆರೆ ನಿಸರ್ಗಪ್ರಿಯರು, ಭಕ್ತರು ಮತ್ತು ಕುಟುಂಬಗಳಿಗಾಗಿ ಶ್ರೇಷ್ಠ ಪವಿತ್ರ ಪ್ರವಾಸ ಸ್ಥಳ.
ಸುಮಾರು 1000 ಎಕರೆ ಪ್ರದೇಶವಿರುವ ಈ ಕೆರೆ. ಬೆಂಗಳೂರಿನ ನೀರಿನ ಅಗತ್ಯವನ್ನು ಪೂರೈಸುವ ಉದ್ದೇಶದಿಂದ ನಿರ್ಮಿಸಲಾಯಿತು.
ಈ ಕೆರೆಯನ್ನ ಮೈಸೂರಿನ ಆಗಿನ ದಿವಾನ್ ಶ್ರೀ ಕೆ. ಶೇಷಾದ್ರಿ ಅಯ್ಯರ್ ಮತ್ತು ಮುಖ್ಯ ಇಂಜಿನಿಯರ್ ಎಂ.ಸಿ. ಹಚ್‌ಚಿನ್ಸ್ ಅವರ ಮಾರ್ಗದರ್ಶನದಲ್ಲಿ ನಿರ್ಮಿಸಲಾಯಿತು.
1894ರಲ್ಲಿ ಆರ್ಕಾವತಿ ನದಿಯ ಮೇಲೆ ನಿರ್ಮಿಸಲಾದ ಈ ಮಾನವ ನಿರ್ಮಿತ ಕೆರೆ, ಒಂದು ಕಾಲದಲ್ಲಿ ಬೆಂಗಳೂರಿನ ಪ್ರಮುಖ ನೀರಿನ ಮೂಲವಾಗಿತ್ತಂತೆ.
ಇಂದು ಇದು ಪಕ್ಷಿ ವೀಕ್ಷಕರಿಗೆ ಸ್ವರ್ಗದಂತೆ ಕಿಂಗ್‌ಫಿಷರ್, ಬ್ರಾಹ್ಮಿಣಿ ಕೈಟ್, ಪಾಂಡ್ ಹೆರಾನ್ ಮುಂತಾದ ಅನೇಕ ಪಕ್ಷಿಗಳನ್ನು ಇಲ್ಲಿ ಕಾಣಬಹುದು.
BMTC ಬಸ್‌ಗಳ ಮೂಲಕ ಸುಲಭವಾಗಿ ತಲುಪಬಹುದು ಈ ಹೆಸರಘಟ್ಟಾ ಕೆರೆ ಗೆ.
ಈ ವಿಡಿಯೋವನ್ನು ನಿಮ್ಮ ಸ್ನೇಹಿತರಿಗೆಲ್ಲಾ ಶೇರ್ ಮಾಡಿ. ಈ ಪೇಜ್‌ನ್ನು ಫಾಲೋ ಮಾಡೋದನ್ನ ಮರೀಬೇಡಿ.
ವಿಜಿಟಿಂಗ್ ವಿವರಗಳು
- ಸರೋವರ ವಿಳಾಸ: ಹೆಸರಘಟ್ಟಾ, ಬೆಂಗಳೂರು ಜಿಲ್ಲೆ, ಕರ್ನಾಟಕ – 560089
- ಟೈಮಿಂಗ್ಸ್: ಪ್ರತಿದಿನ ಬೆಳಿಗ್ಗೆ 6:00 ರಿಂದ ಸಂಜೆ 6:00ರವರೆಗೆ ತೆರೆಯಲಾಗುತ್ತದೆ.
🚌 ಬೆಂಗಳೂರು ಮೆಟ್ರೋ ಮೆಜಸ್ಟಿಕ್‌ನಿಂದ ಹೇಗೆ ಹೋಗುವುದು?
- ಮೆಜಸ್ಟಿಕ್ BMTC ಬಸ್ ನಿಲ್ದಾಣದಿಂದ ಹೆಸರಘಟ್ಟಾ ಕಡೆಗೆ ನೇರ ಬಸ್ ಸೇವೆ ಲಭ್ಯವಿದೆ.
- ಬಸ್ ಸಂಖ್ಯೆ: 253, 253A, ಅಥವಾ 266 (ಹೆಸರಘಟ್ಟಾ ಮಾರ್ಗ)
- ಪ್ರಯಾಣ ಸಮಯ: ಸುಮಾರು 1 ಗಂಟೆ
- ಬಸ್ ನಿಲ್ದಾಣ: ಹೆಸರಘಟ್ಟಾ ಗೇಟ್ ಅಥವಾ ಹೆಸರಘಟ್ಟಾ ಫಾರ್ಮ್ ಬಳಿ ಇಳಿಯಬಹುದು.
#HesaraghattaLake #SpiritualTravel #TempleGuide #BangaloreNature #BirdWatching #Nrityagram #KannadaTravel #DevotionalJourney #HeritageLake #BMTCTrip
0 Comments