ಮಂದಿರದ ಅಗ್ನಿಕುಂಡದಲ್ಲಿ ಪ್ರತ್ಯಕ್ಷವಾದ ಮೂಷಿಕ ವಾಹನ ಸಮೇತ ವಿನಾಯಕ, ಹಯಗ್ರೀವ ಕಾಮಧೇನು ಸ್ಥಳವೇ ಶ್ರೀ ಕ್ಷೇತ್ರ ಹೊನ್ನಾವ ಮಂತ್ರಾಲಯ. ಬೆಂಗಳೂರಿನ ಮಾಗಡಿ ಮುಖ್ಯರಸ್ತೆಯ ಹೊನ್ನಗನಹಟ್ಟಿಯಲ್ಲಿ ನೆಲೆಸಿರುವ ಈ ಕ್ಷೇತ್ರವನ್ನು “ಬೆಂಗಳೂರು ಮಂತ್ರಾಲಯ” ಎಂದು ಕರೆಯಲಾಗುತ್ತದೆ. ಶ್ರೀ ಗುರು ರಾಘವೇಂದ್ರ ಸ್ವಾಮಿಯ ಅನುಗ್ರಹ ಇಲ್ಲಿ ತುಂಬಿ ಹರಿಯುತ್ತದೆ. ಸಾವಿರಾರು ಭಕ್ತರು ತಮ್ಮ ಹರಕೆಗಳನ್ನು ಈಡೇರಿಸಲು ಇಲ್ಲಿ ಬರುತ್ತಾರೆ.
ಇಲ್ಲಿ ಮುಖ್ಯವಾಗಿ ನೀವು ನೋಡಬಹುದು
ಶ್ರೀ ರಾಘವೇಂದ್ರ ಸ್ವಾಮಿಯ ಬೃಂದಾವನ, ಪಂಚಮುಖಿ ಆಂಜನೇಯ ಮತ್ತು ನರಸಿಂಹಸ್ವಾಮಿ ಮೂರ್ತಿಗಳು ಒಂದೇ ಗರ್ಭಗುಡಿಯಲ್ಲಿವೆ
ಭಕ್ತರು KaiSankalpa ಸೇವೆ ಯ ಮುಖಾಂತರ ತಮ್ಮ ಮನಸ್ಸಿನ ಹರಕೆಗಳನ್ನು 21 ದೀಪಗಳಿಂದ ಗುರು ರಾಯರಿಗೆ ಅರ್ಪಿಸುತ್ತಿರುವುದು
ಬಿಳಿ ಬಟ್ಟೆಯಲ್ಲಿ ಗೋಡೆಯ ಬಳಿ ತೆಂಗಿನಕಾಯಿ ಯ ಹರಕೆ ಚೀಲ ಕಟ್ಟುವುದು ಹಾಗೂ ಪ್ರದಕ್ಷಿಣೆ ಹಾಕುತ್ತಿರುವುದನ್ನ ನೋಡಬಹುದು.
ಭಾನುವಾರ ಮತ್ತು ವಿಶೇಷ ದಿನಗಳಲ್ಲಿ ಉಚಿತ ಅನ್ನದಾನ ವ್ಯವಸ್ಥೆ
BMTC ಬಸ್‌ಗಳ ಮೂಲಕ ತಾವರೆಕೆರೆ ಕ್ರಾಸ್ ಅಥವಾ ಹೊನ್ನಗನಹಟ್ಟಿ ಗೆ ಸುಲಭವಾಗಿ ತಲುಪಬಹುದು ಅಲ್ಲಿಂದ ಆಟೋ ಮೂಲಕ ದೇವಸ್ಥಾನವನ್ನಾ ತಲುಪಬಹುದು.
🌟 ಈ ಪವಿತ್ರ ಸ್ಥಳವನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ. ಅವರಿಗೂ ಈ ದೈವಿಕ ಅನುಭವ ಲಭ್ಯವಾಗಲಿ. ಈ ಪೇಜ್‌ನ್ನು ಫಾಲೋ ಮಾಡೋದನ್ನ ಮರೀಬೇಡಿ
-------------------------
ಮಂದಿರ ವಿಳಾಸ ಮತ್ತು ಸಮಯ
- ವಿಳಾಸ: ಶ್ರೀ ಕ್ಷೇತ್ರ ಹೊನ್ನವ ಮಂತ್ರಾಲಯ, ಹೊನ್ನಗನಹಟ್ಟಿ, ಮಾಗಡಿ ಮುಖ್ಯರಸ್ತೆ, ತಾವರೆಕೆರೆ ಹೋಬಳಿ, ಬೆಂಗಳೂರು – 562130
- ಸಂಪರ್ಕ: 📞 085538 00254
ಸಮಯ:
- ಪ್ರತಿದಿನ: ಬೆಳಿಗ್ಗೆ 6:00 – ಸಂಜೆ 7:00
- ಗುರುವಾರ: ಬೆಳಿಗ್ಗೆ 6:00 – ರಾತ್ರಿ 8:30
ಬಸ್ ಮಾರ್ಗ
- ಪ್ರಾರಂಭ ಬಿಂದುವು: ಮೆಜೆಸ್ಟಿಕ್ (ಕೆಂಪೇಗೌಡ ಬಸ್ ನಿಲ್ದಾಣ)
- ಬಸ್ ಸಂಖ್ಯೆ: BMTC ಬಸ್ – ಮಾಗಡಿ ರಸ್ತೆ ಮಾರ್ಗ
- ಗಮ್ಯಸ್ಥಾನ: ತಾವರೆಕೆರೆ ಕ್ರಾಸ್ ಅಥವಾ ಹೊನ್ನಗನಹಟ್ಟಿ ಅಲ್ಲಿಂದ ಆಟೋ ಅಥವಾ ಶೇರ್ ಕ್ಯಾಬ್ ಮೂಲಕ ದೇವಸ್ಥಾನ.
ಹೊನ್ನಗನಹಟ್ಟಿ, ಮಾಗಡಿ ಮುಖ್ಯರಸ್ತೆ, ತಾವರೆಕೆರೆ ಹೋಬಳಿ (ಬೆಂಗಳೂರು – 562130) ಕಡೆಗೆ ಹೋಗುವ BMTC ಬಸ್‌ಗಳ ವಿವರ ಇಲ್ಲಿದೆ:
🚍 ಬಸ್ ನಂಬರ್‌ಗಳು:
- 240-J – ಕೆಆರ್ ಮಾರ್ಕೆಟ್ (ಕಾಲಾಸಿಪಾಳ್ಯ) ↔ ದೊಡ್ಡ ಮಾಸ್ಕಲ್
- 240-MA – ಕೆಆರ್ ಮಾರ್ಕೆಟ್ ↔ ಮಾಗಡಿ
- 242-LA – ಕೆಆರ್ ಮಾರ್ಕೆಟ್ ↔ ತಾವರೆಕೆರೆ
- 374-S – ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತದೆ
- V-240M – ಮಾಗಡಿ ಮಾರ್ಗದ ವಿಶೇಷ ಸೇವೆ
ನಿಕಟ ಮೆಟ್ರೋ ನಿಲ್ದಾಣ
ಮೆಟ್ರೋ ನಿಲ್ದಾಣ: Magadi Road Metro Station ಅಲ್ಲಿಂದ ಬಸ್ ಅಥವಾ ಕ್ಯಾಬ್ ಮೂಲಕ ತಾವರೆಕೆರೆ ಕಡೆಗೆ ಪ್ರಯಾಣ.
0 Comments