Header Ads Widget

Responsive Advertisement

ಮಕರ ಸಂಕ್ರಾಂತಿ 2026 ಭಾರತದ ಅತ್ಯಂತ ಅರ್ಥಪೂರ್ಣ ಹಬ್ಬ

ಮಕರ ಸಂಕ್ರಾಂತಿ  - 2026 : ಭಾರತದ ಅತ್ಯಂತ ಅರ್ಥಪೂರ್ಣ ಹಬ್ಬ

ಮಕರ ಸಂಕ್ರಾಂತಿ ದಿನವು ಉತ್ತರಾಯಣ ಪ್ರಾರಂಭವಾಗುವುದೆಂದು  ಹಾಗೂ ಅತ್ಯಂತ  ಶುಭಕರವೆಂದು ಪರಿಗಣಿಸಲಾಗಿದೆ. ಕೃಷಿ ಬೆಳೆ ಕಟಾವಿನ ಸಂಭ್ರಮ, ಪ್ರಕೃತಿಗೆ ಕೃತಜ್ಞತೆ ಸಲ್ಲಿಸುವುದು ಹಾಗೂ ಸಮುದಾಯದ ಒಗ್ಗಟ್ಟಿನ ಹಬ್ಬವಾಗಿದೆ. 


ಭಾರತದಲ್ಲಿ ಮಕರ ಸಂಕ್ರಾಂತಿ ವಿವಿಧ ರಾಜ್ಯಗಳಲ್ಲಿ ವಿಭಿನ್ನ ಹೆಸರಿನಿಂದ ಆಚರಿಸಲಾಗುತ್ತದೆ. ಪಂಜಾಬಿನಲ್ಲಿ ಲೋಹರಿ, ತಮಿಳುನಾಡಿನಲ್ಲಿ ಪೊಂಗಲ್, ಆಂಧ್ರ ಮತ್ತು ತೆಲಂಗಾಣದಲ್ಲಿ ಪೆದ್ದ ಸಂಕ್ರಾಂತಿ, ಗುಜರಾತ್‌ನಲ್ಲಿ ಉತ್ತರಾಯಣ, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಸಂಕ್ರಾಂತಿ ಎಂದು ಕರೆಯಲಾಗುತ್ತದೆ.

ಇದು ಆಧ್ಯಾತ್ಮವನ್ನು ಕೃಷಿಯೊಂದಿಗೆ ಜೋಡಿಸುವುದರಿಂದ ಭಾರತದ ಅತ್ಯಂತ ಅರ್ಥಪೂರ್ಣ ಹಬ್ಬಗಳಲ್ಲಿ ಒಂದಾಗಿದೆ.ಈ  ದಿನದಂದು ಕಾಶಿಯ ಗಂಗಾ ಸ್ನಾನ, ಸೂರ್ಯನ ಪೂಜೆ ಹಾಗೂ ದಾನ-ಧರ್ಮಗಳಿಗೆ ವಿಶೇಷ ಮಹತ್ವವಿದೆ.

ಮಕರ ಸಂಕ್ರಾಂತಿಯ ಮಹತ್ವ
ಪ್ರಮುಖ ಆಚರಣೆಗಳು
  • ಮಕರ ಸಂಕ್ರಾಂತಿ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ; ಎಳ್ಳು-ಬೆಲ್ಲ, ಸಕ್ಕರೆ ಅಚ್ಚು, ಪೊಂಗಲ್ ಮೊದಲಾದ ಪಾರಂಪರಿಕ ಆಹಾರಗಳನ್ನು ತಯಾರಿಸಲಾಗುತ್ತದೆ. 
  • ಜನರು ಪರಸ್ಪರ ಎಳ್ಳು-ಬೆಲ್ಲ ಹಂಚಿಕೊಳ್ಳುವ ಮೂಲಕ ಮಧುರ ಸಂಬಂಧ ಮತ್ತು ಐಕ್ಯತೆಯನ್ನು ಸೂಚಿಸುತ್ತಾರೆ.
  • ಮನೆಗಳನ್ನು ರಂಗೋಲಿಯಿಂದ ಅಲಂಕರಿಸುತ್ತಾರೆ. 
  • ಈ ಹಬ್ಬವು ಸೂರ್ಯ ದೇವರಿಗೆ ಮತ್ತು ಸಮೃದ್ಧ ಕೊಯ್ಲಿಗಾಗಿ ರೈತರಿಗೆ ಕೃತಜ್ಞತೆ ಸಲ್ಲಿಸುವ ದಿನವಾಗಿಯೂ ಮಹತ್ವ ಹೊಂದಿದೆ
  • ಗಂಗಾ ಸ್ನಾನ, ಸಾಧ್ಯವಾಗದೇ ಹೋಗದೇವರಿಗೆ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದರಿಂದ ಪಾಪಕ್ಷಯವಾಗುತ್ತದೆ ಮತ್ತು ಸಾವಿರ ಯಜ್ಞಗಳ ಫಲ ದೊರೆಯುತ್ತದೆ ಎಂಬ ನಂಬಿಕೆ.
  • ಗಾಯತ್ರಿ  ಮಂತ್ರ, ಗುರು ಮಂತ್ರ ಹಾಗೂ ಸೂರ್ಯ ದೇವರ ಆರಾಧನೆ ಮಾಡುವುದು ಶ್ರೇಷ್ಠ.
  • ತಿಲ, ಬೆಲ್ಲ, ಬಟ್ಟೆ, ಅನ್ನದಾನ ಮಾಡುವುದರಿಂದ ಪುಣ್ಯ ಹೆಚ್ಚುತ್ತದೆ.
  • ಪ್ರಯಾಗರಾಜದಲ್ಲಿ ನಡೆಯುವ 45 ದಿನಗಳ ಮೇಳದಲ್ಲಿ ಸಂಕ್ರಾಂತಿ ದಿನದ ಸ್ನಾನ  ಮಾಘ ಮೇಳಾ  ಅತ್ಯಂತ ಪವಿತ್ರವೆಂದು ನಂಬಲಾಗಿದೆ.
ಕರ್ನಾಟಕದಲ್ಲಿ ಮಕರ ಸಂಕ್ರಾಂತಿ  ಹಬ್ಬ  ಸುಗ್ಗಿ ಹಬ್ಬ ಎಂದು ವಿಶೇಷ ವಾಗಿ ಆಚರಿಸಲ್ಪಡುತ್ತದೆ. ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ದಿನ  ಇದನ್ನು ಉತ್ತರಾಯಣ ಎಂದು ಕರೆಯಲಾಗುತ್ತದೆ.  
ರೈತರು ತಮ್ಮ ಶ್ರಮದ ಫಲವನ್ನು ದೇವರಿಗೆ ಅರ್ಪಿಸುತ್ತಾರೆ.  

 ದಿನ ರೈತರು  ತಾವು ಬೆಳೆದ  ಹೊಸ ಬೆಳೆಗಳನ್ನು ತಮ್ಮ ಮನೆ ದೇವರಿಗೆ ಅರ್ಪಿಸಿ, ಎಳ್ಳು-ಬೆಲ್ಲ ಹಂಚಿ ಕೊಳ್ಳುವುದು. ಹಬ್ಬದ ಪ್ರಮುಖ ಆಚರಣೆಗಳಲ್ಲಿ ಗಾಳಿಪಟ ಹಾರಿಸುವುದು, ಜಾತ್ರೆಗಳಲ್ಲಿ ಭಾಗವಹಿಸುವುದು, ಹಸುಗಳಿಗೆ ಅಲಂಕಾರ ಮಾಡುವುದು, ಹಾಗೂ ಕುಟುಂಬ-ಸ್ನೇಹಿತರೊಂದಿಗೆ ವಿಶೇಷ ಊಟ ಮಾಡಿ ಎಳ್ಳು ಬೆಲ್ಲಾ ಹಂಚುವುದೇ ಸಂಕ್ರಾಂತಿ ಯ ವಿಶೇಷ.

ಮಕರ ಸಂಕ್ರಾಂತಿ, ಉತ್ತರಾಯಣದ ಆರಂಭದೊಂದಿಗೆ ಹೊಸ ಬೆಳಕಿನ, ಶಕ್ತಿಯ ಮತ್ತು ಆಧ್ಯಾತ್ಮಿಕ ಶುದ್ಧಿಯ ಹಬ್ಬವಾಗಿ ಸಂಕ್ರಾಂತಿ ಆಚರಿಸಲಾಗುತ್ತದೆ.


Post a Comment

0 Comments