ಇಲ್ಲೊಂದು ದೇವಾಲಯ ಭಗವಾನ್ ಶ್ರೀ ಗೋಪಾಲನೆ ಭಕ್ತನ ಭಕ್ತಿಗೆ ಮೆಚ್ಚಿ ಸಾಕ್ಷಿ ಯಾಗಿ ಬರಲು ಒಪ್ಪಿ ನೆಲೆಗೊಂಡಿರುವ ದೇವಾಲಯ. ಸಾಕ್ಷಿ ಗೋಪಾಲ್ ದೇವಾಲಯ ಒಡಿಶಾದ ಪುರಿಯಲ್ಲಿರುವ ಪವಿತ್ರ ಮತ್ತು ಜನಪ್ರಿಯ ದೇವಾಲಯಗಳಲ್ಲಿ ಒಂದಾಗಿದೆ.
ಜನಪದ ಗಳ ಪ್ರಕಾರ ವೃದ್ಧ ಬ್ರಾಹ್ಮಣ ಮತ್ತು ಯುವ ಬ್ರಾಹ್ಮಣನು ಒಟ್ಟಿಗೆ ವೃಂದಾವನ ತೀರ್ಥಯಾತ್ರೆಗೆ ಹೊರಟರು . ಯುವ ಬ್ರಾಹ್ಮಣನು ಬಹಳ ಭಕ್ತಿಯಿಂದ ವೃದ್ಧ ಬ್ರಾಹ್ಮಣನಿಗೆ ಸೇವೆ ಸಲ್ಲಿಸಿದನು. ಕೃತಜ್ಞತೆಯಾಗಿ, ವೃದ್ಧ ಬ್ರಾಹ್ಮಣನು ತನ್ನ ಮಗಳನ್ನು ಯುವ ಬ್ರಾಹ್ಮಣನಿಗೆ ಮದುವೆ ಮಾಡುವುದಾಗಿ ಭರವಸೆ ನೀಡಿದನು. ಆದಾಗ್ಯೂ, ಮನೆಗೆ ಹಿಂದಿರುಗಿದ ನಂತರ, ವೃದ್ಧ ಬ್ರಾಹ್ಮಣನ ಕುಟುಂಬವು ಮದುವೆಯನ್ನು ವಿರೋಧಿಸಿತು ಮತ್ತು ಗ್ರಾಮಸ್ಥರು ಸಾಕ್ಷಿಗಾಗಿ ಒತ್ತಾಯಿಸಿದರು.
ಯುವಕನ ಭಕ್ತಿಗೆ ಮನಸೋತ ಭಗವಾನ್ ಗೋಪಾಲನು ಸಾಕ್ಷಿಯಾಗಿ ಬರಲು ಒಪ್ಪಿದ ಆದರೆ ಯುವಕ ಹಿಂತಿರುಗಿ ನೋಡಿದಾಗ ಕಲ್ಲಿನ ಮೂರ್ತಿಯಾಗಿ ಮಾರ್ಪಟ್ಟ. ಇದನ್ನು ಕಂಡ ಗ್ರಾಮಸ್ಥರು ಮದುವೆಗೆ ಅನುಮತಿ ನೀಡಿದರು ಮತ್ತು "ಸಾಕ್ಷಿ ಗೋಪಾಲ್" ಎಂದು ಕರೆಯಲ್ಪಡುವ ದೇವಾಲಯವನ್ನು ನಿರ್ಮಿಸಿದರು.
ಪುರಿ ಜಗನ್ನಾಥನ ಯಾತ್ರೆ ಪೂರ್ಣಗೊಳ್ಳುವುದು ಸಾಕ್ಷಿ ಗೋಪಾಲ ದೇವಾಲಯವನ್ನು ದರ್ಶನ ಮಾಡಿದ ಬಳಿಕವೆ ಇದಕ್ಕೆ ಭಗವಾನ್ ಗೋಪಾಲನೇ ಸಾಕ್ಷಿ ಎಂಬುದು ಭಕ್ತರ ನಂಬಿಕೆ.
0 Comments