ದ್ವಾದಶ ಜ್ಯೋತಿರ್ಲಿಂಗಗಳು ಅಂದರೆ 12 ಜ್ಯೋತಿರ್ಲಿಂಗಗಳ ಪ್ರತಿರೂಪಗಳ ನ್ನ ಒಂದೇ ಕಡೆ ನೋಡಬೇಕು ಅಂದರೆ ಬೆಂಗಳೂರು ದಕ್ಷಿಣ ಭಾಗದ ರಾಜರಾಜೇಶ್ವರಿ ನಗರದಲ್ಲಿರುವ ಒಂಕಾರೇಶ್ವರ ದೇವಾಲಯ ದಲ್ಲಿ ನೋಡಬಹುದು. ಇಲ್ಲಿ ನೀವು ನೋಡಲೇಬೇಕಾದ ಪ್ರಮುಖ ಆಕರ್ಷಣೆಗಳು:
ದ್ವಾದಶ ಜ್ಯೋತಿರ್ಲಿಂಗಗಳು ಒಂದೇ ಸ್ಥಳದಲ್ಲಿ
ಭಾರತದ 12 ಜ್ಯೋತಿರ್ಲಿಂಗಗಳ ಪ್ರತಿರೂಪಗಳ ನ್ನ ಕಾಶಿಯಿಂದ ರಾಮೇಶ್ವರಂವರೆಗಿನ ಎಲ್ಲ ಲಿಂಗಗಳ ನ್ನ ಒಂದೇ ಆವರಣದಲ್ಲಿ ದರ್ಶನ ಮಾಡಬಹುದಾದ –
ಶ್ರೀ ಒಂಕಾರೇಶ್ವರ ಶಿವಲಿಂಗದ ದರ್ಶನ ಪ್ರಮುಖ ಗರ್ಭಗುಡಿಯಲ್ಲಿ
ಒಂಕಾರೇಶ್ವರ ದೇವಾಲಯ ದಲ್ಲಿರುವ ಘಂಟೆಯು ಸುಮಾರು 1200 ಕೆ.ಜಿ ತೂಕವಿದ್ದು, ಇದು ಬೆಂಗಳೂರಿನ ಅತಿದೊಡ್ಡ ದೇವಾಲಯ ಘಂಟೆಗಳಲ್ಲಿ ಒಂದಾಗಿದೆ. .
ಎಚ್‌ಎಂಟಿ ಘಡಿಯಾರವನ್ನು ಕೂಡ ನೋಡಬಹುದು.
ದೇವಾಲಯದ ಆವರಣದಲ್ಲಿ ಧ್ಯಾನ ಮಂದಿರ ಮತ್ತು ಯೋಗ ಕೇಂದ್ರ ಗಳನ್ನ ಕೂಡ ನೋಡಬಹುದು.
ಒಂಕಾರೇಶ್ವರ ದೇವಾಲಯ ದಲ್ಲಿ ನಿಂತು ನಗರದ ಸುಂದರ ನೋಟವನ್ನು ಕಾಣಬಹುದು.
ಮೆಟ್ರೋ ಹಾಗೂ BMTC ಬಸ್ , ವಿಶೇಷವಾಗಿ ಪ್ರತಿದಿನದ BMTC ದಿವ್ಯ ದರ್ಶನ ಪ್ಯಾಕೇಜ್ ನಲ್ಲಿ ಒಂಕಾರೇಶ್ವರ ದೇವಾಲಯ ವನ್ನಾ ಸುಲಭವಾಗಿ ದರ್ಶನ ಮಾಡಬಹುದು.
📸 ಈ ಪೇಜ್ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ – ಜ್ಯೋತಿರ್ಲಿಂಗ ದರ್ಶನದ ಅನುಭವವನ್ನು ಅವರಿಗೂ ನೀಡೋಣ! ಇನ್ನಷ್ಟು ದೇವಾಲಯ ಮಾಹಿತಿ ಗಾಗಿ ಫಾಲೋ ಮಾಡೋದು ಮರೀಬೇಡಿ
_____________________________________
🕰️ ದೇವಾಲಯದ ಸಮಯಗಳು
- ಬೆಳಿಗ್ಗೆ: 7:00 ರಿಂದ 12:45
- ಸಂಜೆ: 4:00 ರಿಂದ 8:00 (ಹೆಚ್ಚುವರಿ ಕಾರ್ಯಕ್ರಮಗಳ ಸಮಯದಲ್ಲಿ ಬದಲಾಯಿಸಬಹುದು)
📍 ಸ್ಥಳ ಮಾಹಿತಿ
- ದೇವಾಲಯದ ಹೆಸರು: Omkareshwara Temple
- ವಿಳಾಸ: WG24+C9W, Omkar Hills Temple Road, Banashankari 6th Stage, 11th Block, Srinivaspura, Bengaluru – 560060
- ದೂರವಾಣಿ: 080 2861 2586
- ವೆಬ್‌ಸೈಟ್: Omkar Hills Temple
🧭 ಪ್ರವೇಶ ಮಾರ್ಗಗಳು
- ಹತ್ತಿರದ ಬಸ್ ನಿಲ್ದಾಣ: ರಾಜರಾಜೇಶ್ವರಿ
- ಮೆಟ್ರೋ: ರಾಜರಾಜೇಶ್ವರಿ ನಗರ ಮೆಟ್ರೋ ನಿಲ್ದಾಣದಿಂದ ಟ್ಯಾಕ್ಸಿ ಅಥವಾ ಆಟೋ ಮೂಲಕ 10-15 ನಿಮಿಷ
- ರೈಲ್ವೆ ನಿಲ್ದಾಣ: ಕೆಎಸ್‌ಆರ್ ಬೆಂಗಳೂರು (Majestic)
💡 ಸಲಹೆಗಳು
- ಶಾಂತ ದರ್ಶನಕ್ಕಾಗಿ ಬೆಳಿಗ್ಗೆ ಅಥವಾ ವಾರದ ಮಧ್ಯಭಾಗದಲ್ಲಿ ಭೇಟಿ ನೀಡಿ
- ಪಾದರಕ್ಷೆ ಆರಾಮದಾಯಕವಾಗಿರಲಿ – ಹಿಲ್ಸ್ ಪ್ರದೇಶದಲ್ಲಿ ನಡೆಯುವ ಹಾದಿ ಇಳಿಜಾರಿನಲ್ಲಿರಬಹುದು
- ನಗದು ಇಟ್ಟುಕೊಳ್ಳಿ – ಪಾರ್ಕಿಂಗ್ ಶುಲ್ಕ ₹20 (ಕಾರ್), ₹10 (ಬೈಕ್)
🚌 ಮಜೆಸ್ಟಿಕ್ → ಓಂಕಾರೇಶ್ವರ ದೇವಾಲಯ (ರಾಜರಾಜೇಶ್ವರಿ ನಗರ)
🛑 ಎಲ್ಲಿ ಹತ್ತಬೇಕು?
- ಪ್ಲಾಟ್‌ಫಾರ್ಮ್ 21 ರಿಂದ 24 (ಮೈಸೂರು ರಸ್ತೆಯ ಕಡೆಗೆ ಹೋಗುವ ಬಸ್‌ಗಳು)
🚏 ಬಸ್ ಸಂಖ್ಯೆ:
- 225H – RR ನಗರ ಬಸ್ ನಿಲ್ದಾಣ, ಓಂಕಾರೇಶ್ವರ ದೇವಸ್ಥಾನದ ಹತ್ತಿರ
- 225Q, 225J, 225K – ಇವು ಕೂಡ RR ನಗರ ಅಥವಾ ಹತ್ತಿರದ ಪ್ರದೇಶಗಳಿಗೆ ಹೋಗುವ ಬಸ್‌ಗಳು
- 241B / 241D – ಮೈಸೂರು ರಸ್ತೆ ಮಾರ್ಗವಾಗಿ, RR ನಗರ ಗೇಟ್ ಮೂಲಕ
🕒 225H ಬಸ್ ಸಮಯ (ಅಂದಾಜು):
- ಬೆಳಿಗ್ಗೆ 9:30
- ಮಧ್ಯಾಹ್ನ 1:15
- ಸಂಜೆ 4:45
- ರಾತ್ರಿ 8:10
📏 ದೂರ: ~18 ಕಿ.ಮೀ
🕘 ಪ್ರಯಾಣ ಸಮಯ: ~1 ಗಂಟೆ
🛕 ಹತ್ತಿರದ ನಿಲ್ದಾಣ:
- Omkareshwara Temple Stop ಅಥವಾ RR Nagar Arch
(ಇಲ್ಲಿ ಓಂಕಾರೇಶ್ವರ ದೇವಾಲಯವು ನಡಿಗೆ ದೂರದಲ್ಲಿ ಇದೆ)
0 Comments