12ನೇ ಶತಮಾನದಲ್ಲಿ ತತ್ವಜ್ಞ ಮತ್ತು ಸಾಮಾಜಿಕ ಸುಧಾರಕ ಬಸವಣ್ಣ ನವರು ಕೊನೆಗೆ ಲೋಕವ್ಯವಹಾರಗಳಿಂದ ದೂರವಾಗಿ ಪವಿತ್ರ ಸ್ಥಳ ವಾದ ಇದೇ ಕೂಡಲಸಂಗಮ ಕ್ಕೆ ಮರಳಿದರು.
ನೀವು ನೋಡುತ್ತಾ ಇರುವ ಇದೇ ಕ್ರಿಷ್ಣಾ ಮತ್ತು ಮಲಪ್ರಭಾ ನದಿಗಳ ಸಂಗಮದಲ್ಲಿ ಗಾಢ ಧ್ಯಾನಕ್ಕೆ ಕುಳಿತು, ಆತ್ಮವನ್ನು ಶಿವನಲ್ಲಿ ಲೀನಗೊಳಿಸಿದರು. ಈದನ್ನು ಐಕ್ಯ ಎಂದು ಕರೆಯಲಾಗುತ್ತದೆ, ನೀವು ನೋಡಬಹುದು ಬಸವಣ್ಣನವರ ಐಕ್ಯ ಮಂಟಪ. – ಅಂದರೆ ಆತ್ಮ ಮತ್ತು ಪರಮಾತ್ಮ ಒಂದಾಗುವುದು. ಇದು ಸಾಮಾನ್ಯ ಮರಣವಲ್ಲ, ದೇಹದಾಚೆಯ ದಿವ್ಯ ಸಂಗಮವೆಂದು ಭಕ್ತರು ಭಾವಿಸುತ್ತಾರೆ.
ಕೂಡಲಸಂಗಮದಲ್ಲಿ ನೋಡಲೇಬೇಕಾದ ಸ್ಥಳಗಳು – ಪ್ರವಾಸಿಗರ ಸಂಪೂರ್ಣ ಗೈಡ್
ಕೃಷ್ಣ ಮತ್ತು ಮಲಪ್ರಭಾ ನದಿಗಳ ಸಂಗಮ
ಕೃಷ್ಣ ಮತ್ತು ಮಲಪ್ರಭಾ ನದಿಗಳು ಎರಡು ಸೇರಿ ಒಂದಾಗುವ ಈ ಜಾಗವೇ ಕೂಡಲ ಅಥವಾ ಸಂಗಮ, ಕ್ರಮೇಣ ಇದು ಕೂಡಲಸಂಗಮವಾಗಿದೆ. ಕೂಡಲಸಂಗಮಕ್ಕೆ ಬರುವ ಭಕ್ತಾದಿಗಳು ಕೃಷ್ಣ ಮತ್ತು ಮಲಪ್ರಭಾ ನದಿಯಲ್ಲಿ ಸ್ನಾನ ಮಾಡಿದರೆ ಪಾಪ ವಿಮೋಚನೆ ದೊರೆಯುತ್ತದೆ ಎಂಬ ನಂಬಿಕೆ ಇದೆ. ಇಲ್ಲಿ ಸೂರ್ಯಾಸ್ತದ ಮತ್ತು ಸೂರ್ಯೋದಯದ ದೃಶ್ಯಗಳು ಅತ್ಯಂತ ಮನೋಹರಕವಾಗಿರುತ್ತದೆ. ಮಹಾಶಿವರಾತ್ರಿ ಹಾಗೂ ಬಸವ ಜಯಂತಿಯ ವಿಶೇಷ ದಿನಗಳಲ್ಲಿ ಈ ಸ್ಥಳಕ್ಕೆ ಸಾವಿರಾರು ಭಕ್ತರು ಬಂದು ಕೃಷ್ಣ ಮತ್ತು ಮಲಪ್ರಭ ನದಿಯಲ್ಲಿ ಸ್ನಾನ ಮಾಡಿ ಸಂಗಮೇಶ್ವರನ ದರ್ಶನ ಹಾಗೂ ಬಸವಣ್ಣನವರ ದರ್ಶನವನ್ನು ಪಡೆದು ಪುನೀತರಾಗುತ್ತಾರೆ.
|  | | | | |
| ಕೃಷ್ಣ ಮತ್ತು ಮಲಪ್ರಭಾ ನದಿಗಳ ಸಂಗಮ |
ಸಂಗಮೇಶ್ವರ ದೇವಾಲಯ
ಸಂಗಮೇಶ್ವರ ದೇವಾಲಯವು ಕೃಷ್ಣ ಮತ್ತು ಮಲಪ್ರಭಾ ನದಿಯ ದಡದಲ್ಲಿ ನೀವು ಕಾಣಬಹುದು. ಈ ದೇವಾಲಯವು ಶತಮಾನಗಳ ಇತಿಹಾಸ ಹೊಂದಿದ ಶಿವಾಲಯವಾಗಿದ್ದು ಇದು ಚಾಲುಕ್ಯ ಶೈಲಿಯ ಪ್ರಭಾವ ಹೊಂದಿದೆ. ಬಸವಣ್ಣನವರು ತಮ್ಮ ಕೊನೆಯ ದಿನಗಳನ್ನು ಇಲ್ಲಿ ಕಳೆದರೂ ಎಂಬ ನಂಬಿಕೆ ಇದೆ. ಶಿವರಾತ್ರಿ ಹಾಗೂ ಬಸವಣ್ಣನವರ ಜಯಂತಿ ದಿವಸ ಇಲ್ಲಿ ವಿಶೇಷ ಪೂಜೆಗಳು ಅಭಿಷೇಕಗಳು ವಿಶೇಷವಾಗಿ ಸಂಗಮೇಶ್ವರ ನಡೆಯುತ್ತವೆ.
 |
| ಸಂಗಮೇಶ್ವರ ದೇವಾಲಯ |
ಐಕ್ಯ ಮಂಟಪ : ಬಸವಣ್ಣ ನವರ ಸಮಾಧಿ
ಬಸವಣ್ಣನವರು ತತ್ವಜ್ಞರು ಹಾಗೂ ಸಮಾಜ ಸುಧಾರಕರು. ತಮ್ಮ ಕೊನೆಯ ದಿನಗಳಲ್ಲಿ ಕೂಡಲಸಂಗಮದಲ್ಲಿ ಕಾಲ ಕಳೆದರೆಂದು ಭಕ್ತರು ಹೇಳುತ್ತಾರೆ. ಲೋಕವ್ಯವಹಾರಗಳಿಂದ ದೂರವಾಗಿ ಪವಿತ್ರ ಸ್ಥಳ ವಾದ ಇದೇ ಕೂಡಲಸಂಗಮ ಕ್ಕೆ ಮರಳಿದರು.
ನೀವು ನೋಡುತ್ತಾ ಇರುವ ಇದೇ ಕ್ರಿಷ್ಣಾ ಮತ್ತು ಮಲಪ್ರಭಾ ನದಿಗಳ ಸಂಗಮದ ದಡದಲ್ಲಿ ಗಾಢ ಧ್ಯಾನಕ್ಕೆ ಕುಳಿತು, ಆತ್ಮವನ್ನು ಶಿವನಲ್ಲಿ ಲೀನಗೊಳಿಸಿದರು. ಈದನ್ನು ಐಕ್ಯ ಎಂದು ಕರೆಯಲಾಗುತ್ತದೆ, ನೀವು ನೋಡಬಹುದು ಬಸವಣ್ಣನವರ ಐಕ್ಯ ಮಂಟಪ. ಶಾಂತ ವಾತಾವರಣ ಮತ್ತು ಪವಿತ್ರತೆ ಈ ಸ್ಥಳವನ್ನು ಧ್ಯಾನ ಮತ್ತು ಚಿಂತನೆಗೆ ಅನುಕೂಲಕರವಾಗಿದೆ.
ಅಲ್ಲಮಪ್ರಭು ಗುಹೆ
ಅಲ್ಲಮಪ್ರಭುಗಳು ಇಲ್ಲಿ ತಪಸ್ಸು ಮಾಡಿದರೆಂದು ಭಕ್ತರು ನಂಬಿದ್ದಾರೆ. ಧ್ಯಾನ ಮತ್ತು ತಪಸ್ಸಿ ಗೆ ಈ ಸ್ಥಳ ಪ್ರಸಿದ್ಧವಾಗಿದೆ. ಇಲ್ಲಿಯ ಗುಹೆಯೊಳಗಿನ ಶಾಂತ ವಾತಾವರಣವು ಆತ್ಮ ಚಿಂತನೆಗೆ ಪ್ರೇರಕವಾಗಿದೆ.
ಬಸವೇಶ್ವರ ಮ್ಯೂಸಿಯಂ
ಬಸವೇಶ್ವರರ ಮ್ಯೂಸಿಯಂನಲ್ಲಿ ನೀವು ಬಸವಣ್ಣನವರ ವಚನ ಸಾಹಿತ್ಯ, ಜೀವನ ಚರಿತ್ರೆ ಹಾಗೂ ಲಿಂಗಾಯತ ಧರ್ಮದ ಇತಿಹಾಸವನ್ನು ವಿವರವಾಗಿ ಪ್ರದರ್ಶಿಸಲಾಗಿದೆ. ಇಲ್ಲಿ ಸಂಶೋಧಕರು ಅಥವಾ ವಿದ್ಯಾರ್ಥಿಗಳು, ಪ್ರವಾಸಿಗರು ಹೆಚ್ಚಿನ ಮಾಹಿತಿಯನ್ನು ಈ ಕೇಂದ್ರದಲ್ಲಿ ಪಡೆಯಬಹುದು.
ಈ ಪವಿತ್ರ ಕ್ಷೇತ್ರಗಳನ್ನ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಹಾಗೂ ಈ ಪೇಜ್‌ನ್ನು ಫಾಲೋ ಮಾಡೋದನ್ನ ಮರೀಬೇಡಿ.
ಪ್ರವಾಸಿಗರ ಉಪಯುಕ್ತಾ ಮಾಹಿತಿ
ಕೂಡಲಸಂಗಮ ದೇವಸ್ಥಾನದ ವಿಳಾಸ :
ಶ್ರೀ ಸಂಗಮೇಶ್ವರ ದೇವಾಲಯ ಕೂಡಲಸಂಗಮ , ಬಾಗಲಕೋಟೆ ಜಿಲ್ಲೆ, ಕರ್ನಾಟಕ : 587112
ದೇವಸ್ಥಾನಕ್ಕೆ ತಲುಪುವುದು ಹೇಗೆ:
- ಹುಬ್ಬಳ್ಳಿ, ವಿಜಯಪುರ, ಬಾಗಲಕೋಟೆ ನಗರಗಳಿಂದ ನೇರ ಬಸ್ ಗಳಿಂದ ತಲುಪಬಹುದು.
- ಬಾಗಲಕೋಟೆ ರೈಲ್ವೆ ನಿಲ್ದಾಣದಿಂದ ಸ್ಥಳೀಯ ಬಸ್, ಟ್ಯಾಕ್ಸಿ ಅಥವಾ ಆಟೋ ಮೂಲಕ ಕೂಡಲಸಂಗಮ ವನ್ನಾ ತಲುಪಬಹುದು.
ದರ್ಶನ ಸಮಯ
- ಬೆಳಿಗ್ಗೆ 5:00 – ಮುಂಜಾನೆ ದರ್ಶನ
- ರಾತ್ರಿ 8:00 – ಶೇಜ್ ಆರತಿ
ನೋಡಲೇಬೇಕಾದ ಸ್ಥಳಗಳು
- ಕೃಷ್ಣಾ–ಮಲಪ್ರಭಾ ನದಿಗಳ ಸಂಗಮ
- ಸಂಗಮೇಶ್ವರ ದೇವಾಲಯ
- ಬಸವೇಶ್ವರ ಸ್ಮಾರಕ
- ಅಲಮಪ್ರಭು ಗುಹೆ
- ಬಸವೇಶ್ವರ ಮ್ಯೂಸಿಯಂ
ದರ್ಶನ ಹೀಗೆ ಮಾಡಿ
- ಕೃಷ್ಣ ಮತ್ತು ಮಲಪ್ರಭಾ ನದಿಗಳ ಸಂಗಮದ ತಟದಲ್ಲಿ ಧ್ಯಾನ ಮಾಡಿ.
- ಸಂಗಮೇಶ್ವರ ದೇವಾಲಯದಲ್ಲಿ ದರ್ಶನ ಮಾಡಿ.
- ಬಸವಣ್ಣನ ಸಮಾಧಿಗೆ ಪ್ರಾರ್ಥನೆ ಸಲ್ಲಿಸಿ.
- ಪ್ರಸಾದ ಸ್ವೀಕರಿಸಿ.
ಈ ಆಹಾರಗಳನ್ನು ಟ್ರೈ ಮಾಡಿ
- ಜೋಳದ ರೊಟ್ಟಿ, ಎಣ್ಣೆಗಾಯಿ
- ಹುಳಿಯೊಗರೆ , ಬೆಳ್ಳುಳ್ಳಿ ಚಟ್ನಿ
ವಾಸದ ಆಯ್ಕೆಗಳು
ಹೆಚ್ಚಿನ ಮಾಹಿತಿಗಾಗಿ ಈ ಪೇಜ್‌ಗಳನ್ನು ನೋಡಿ
0 Comments