ಶೃಂಗಗಿರಿ ಶ್ರೀ ಷಣ್ಮುಖ ಸ್ವಾಮಿ ದೇವಸ್ಥಾನ, ಬೆಂಗಳೂರಿನ ರಾಜ ರಾಜೇಶ್ವರಿ ನಗರದಲ್ಲಿ ಶೃಂಗಗಿರಿ ಎಂಬ ಪುಟ್ಟ ಬೆಟ್ಟದ ಮೇಲೆ ನೆಲೆಗೊಂಡಿದ್ದು. ಈ ದೇವಾಲಯವು ಬೆಂಗಳೂರಿನಿಂದ 13 ಕಿಮೀ ದೂರದಲ್ಲಿದೆ. 

ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥ ಮಹಾಸ್ವಾಮೀಜಿಯವರು ದೇವಸ್ಥಾನದ ಶಂಕುಸ್ಥಾಪನೆ ಮಾಡಿದ್ದಾರೆ 

ಈ ಶೃಂಗಗಿರಿ ಶ್ರೀ ಷಣ್ಮುಖ ಸ್ವಾಮಿ ದೇವಾಲಯದ ವಿಶಷತೆಗಳು ಏನಪ್ಪ ಅಂದರೆ..

ನೀವು ನೋಡಬಹುದು  ವಿನಾಯಕ ದೇವಾಲಯ ಪಂಚಮುಖಿ ವಿನಾಯಕನು "ಸಿಂಹವಾಹನರೂಢ" ಅಂದರೆ ಸಿಂಹದ ಮೇಲೆ ಕುಳಿತು ಸವಾರಿಯನ್ನು ಮಾಡುತ್ತಿರುವುದೂ..
ಕೆಂಪು ಗುಹೆಯಿಂದ ಸುತ್ತುವರಿದ ವಿಶಾಲವಾದ ಶಿವ ತ್ರಿಶೂಲ ಹಾಗೂ ಭಗವಾನ್ ಅರುಣಾಚಲೇಶ್ವರನ ಗರ್ಭಗುಡಿಯಲ್ಲಿ ಅಮೂಲ್ಯವಾದ "ಸ್ಪಟಿಕ ಶಿವಲಿಂಗ" ವನ್ನು ನೋಡಬಹುದು.

6 ಮುಖಗಳನ್ನು ಹೊಂದಿರುವ ಈ ದೇವಾಲಯದ ಗೋಪುರ.  ಸುಬ್ರಹ್ಮಣ್ಯನ ವಿಗ್ರಹವನ್ನು ಈ ಗೋಪುರದ ಮೇಲೆ ವಿನ್ಯಾಸಗೊಳಿಸಲಾಗಿದೆ. ಭಗವಂತನ ಈ 6 ಮುಖಗಳು ಕೀರ್ತಿ, ಸಂಪತ್ತು, ಐಶ್ವರ್ಯ, ಜ್ಞಾನ, ವೈರಾಗ್ಯ ಮತ್ತು ಶಕ್ತಿಯನ್ನು ಪ್ರತಿನಿಧಿಸುತ್ತಿದೆ 

ಸೂರ್ಯನು ತನ್ನ ದಿಕ್ಕನ್ನು ಯಾವುದೇ ರೀತಿಯಲ್ಲಿ ಬದಲಾಯಿಸಿದರೂ ಸುಬ್ರಹ್ಮಣ್ಯನ ವಿಗ್ರಹ ಕಾಣುವಂತೆ ಇದನ್ನು ನಿರ್ಮಿಸಿದ್ದಾರೆ. ದೇವಾಲಯದ ಗೋಪುರದ ಮೇಲೆ, ಸ್ಫಟಿಕದ ಗುಮ್ಮಟವನ್ನು 3,000 ಸ್ಫಟಿಕಗಳೊಂದಿಗೆ ರಚಿಸಲಾಗಿದೆ. 

ಗರ್ಭಗುಡಿಯಲ್ಲಿ ಭಗವಾನ್ ಷಣ್ಮುಖ ಮತ್ತು ಅವರ ಇಬ್ಬರು ಪತ್ನಿಯರಾದ ದೇವಸೇನಾ ಮತ್ತು ವಲ್ಲಿ  ತಮ್ಮ ಭಕ್ತರನ್ನು ಆಶೀರ್ವದಿಸುತ್ತಿರುವುದು  ಇದು ಇಲ್ಲಿನ ಇನ್ನೊಂದು ವಿಶೇಷ

ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುವುದರಿಂದ ಆರೋಗ್ಯ, ಶಾಂತಿ ಮತ್ತು ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ ಎನ್ನುವುದು ಇಲ್ಲಿನ ಭಕ್ತರ ನಂಬಿಕೆ.