ಕೋನಾರ್ಕ್ ಸೂರ್ಯ ದೇವಾಲಯದೊಳಗಿನ ಪ್ರಮುಖ ಆಕರ್ಷಣೆಗಳ
ಪುರಿ ಜಗನ್ನಾಥನ ದರ್ಶನದ ಬಳಿಕ ಪುರಿ ಯಿಂದ 35 ಕೀಮೀ ದೂರದಲ್ಲಿರುವ ಕೋನಾರ್ಕ್ ಸೂರ್ಯ ದೇವಾಲಯಕ್ಕೆ ನೀವೇನಾದರೂ ಹೋಗ್ತಾಯಿದ್ದರೆ ದೇವಾಲಯದೊಳಗಿನ ಈ ಪ್ರಮುಖ ಆಕರ್ಷಣೆಗಳನ್ನು ತಪ್ಪದೇ ನೋಡಿ ಮೊದಲನೆಯದು
1. ಕೋನಾರ್ಕ್ ಸೂರ್ಯ ದೇವಾಲಯ - Sun Temple – 13ನೇ ಶತಮಾನದಲ್ಲಿ ನಿರ್ಮಿತವಾದ ಈ ದೇವಾಲಯ, ಎಳು ಕುದುರೆಗಳು ಎಳೆಯುವ ಭವ್ಯ ರಥದ ಆಕಾರದಲ್ಲಿದೆ. ಇದರಲ್ಲಿ 24 ಕಲ್ಲಿನ ಚಕ್ರಗಳಿದ್ದು, ಪ್ರತಿಯೊಂದು ಚಕ್ರವು ಸೂರ್ಯನ ಚಲನೆ ಮತ್ತು ಕಾಲಚಕ್ರವನ್ನು ಪ್ರತಿಬಿಂಬಿಸುತ್ತದೆ.
2. ಸಿಂಹ-ಆನೆ-ಮಾನವ ಶಿಲ್ಪ
ಕೋನಾರ್ಕ್ ಸೂರ್ಯ ದೇವಾಲಯದ ಪ್ರವೇಶದ ಬಳಿ ಸಿಂಹವು ಆನೆಯನ್ನು ತುಳಿಯುತ್ತಿರುವ, ಆನೆ ಮಾನವನನ್ನು ತುಳಿಯುತ್ತಿರುವ ಶಿಲ್ಪವಿದೆ. ಈ ಶಿಲ್ಪ ನಮಗೆ ಹೇಳುವುದು ಏನೆಂದರೆ
ಗರ್ವ (ಸಿಂಹ) ಮತ್ತು ಐಶ್ವರ್ಯ (ಹಸ್ತಿ) ಎರಡೂ ಒಂದರ ಮೇಲೊಂದು ಬಂದರೆ ಮನುಷ್ಯ ನು ಮಾನವೀಯ ಗುಣಗಳನ್ನು ಕಳೆದುಕೊಳ್ಳುತ್ತಾನೆ
3. SUN ಡಯಲ್
ನೀವು ನೋಡಬಹುದು ದೇವಾಲಯದಲ್ಲಿ 24 ಕಲ್ಲಿನ ಚಕ್ರಗಳು, ಪ್ರಾಚೀನ ಕಾಲದ ಘಡಿಯಂತೆ ಕೆಲಸ ಮಾಡುತ್ತವೆ. ಪ್ರತಿಯೊಂದು ಚಕ್ರದಲ್ಲಿ 8 ಪ್ರಮುಖ ಅಂಚುಗಳಿದ್ದು, ಅವುಗಳ ನೆರಳನ್ನು ನೋಡಿ ಸಮಯವನ್ನು ತಿಳಿಯಬಹುದು.
4. ₹10 ಭಾರತೀಯ ರೂಪಾಯಿಯ ನೋಟಿನಲ್ಲಿರುವ ಚಕ್ರ
ಕೋನಾರ್ಕ್ ಸೂರ್ಯ ದೇವಾಲಯದ ಈ ಒಂದು ಚಕ್ರವನ್ನು ಭಾರತೀಯ ₹10 ನೋಟಿನ ಹಿಂದಿನ ಭಾಗದಲ್ಲಿ ಮುದ್ರಿಸಲಾಗಿದೆ. ಇದು ಭಾರತದ ವೈಭವಶಾಲಿ ಸಂಸ್ಕೃತಿಯ ಪ್ರತೀಕವಾಗಿದೆ.
5. ಶೃಂಗಾರ ಮತ್ತು ನೃತ್ಯ ಶಿಲ್ಪಗಳು
ಈ ದೇವಾಲಯದ ಗೋಡೆಗಳಲ್ಲಿ ಅಪ್ಸರೆಯರು, ನೃತ್ಯಾಂಗನರು, ಸಂಗೀತಗಾರರು ಮತ್ತು ದೈನಂದಿನ ಜೀವನದ ದೃಶ್ಯಗಳನ್ನು ಚಿತ್ರಿಸುವ ಶಿಲ್ಪಗಳಿವೆ.
6. ನೃತ್ಯ ಮಂದಿರ (ನಾಟ್ಯ ಮಂದಪ)
ಈ ಮಂದಿರದ ಮೇಲ್ಛಾವಣಿ ಕುಸಿದಿದ್ದರೂ, ಅದರ ಅಡಿಪಾಯ ಮತ್ತು ಕಂಬಗಳು ಇನ್ನೂ ಉಳಿದಿವೆ. ಇದು ಸೂರ್ಯನಿಗೆ ನೃತ್ಯ ಅರ್ಪಣೆಗೆ ಬಳಸಲಾಗುತ್ತಿತ್ತು.
7. ಪ್ರವೇಶದ ಕುದುರೆ ಶಿಲ್ಪ
ಪೂರ್ವ ದ್ವಾರದ ಬಳಿ ಒಂದು ಶಕ್ತಿಶಾಲಿ ಕುದುರೆಯ ಶಿಲ್ಪವಿದೆ, ಅದು ಯೋಧನನ್ನು ತುಳಿಯುತ್ತಿರುವಂತೆ ತೋರಿಸುತ್ತದೆ. ಇದು ಕಾಲದ ಶಕ್ತಿಯ ಪ್ರತೀಕವಾಗಿದೆ.
ಕೋನಾರ್ಕ್ ಸೂರ್ಯ ದೇವಾಲಯ ಭಾರತೀಯ ಸಾಂಸ್ಕೃತಿಕ ಪರಂಪರೆ ಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ಕೋನಾರ್ಕ್ ಸೂರ್ಯ ದೇವಾಲಯವನ್ನಾ ಮಿಸ್ ಮಾಡದೆ ನೋಡಿ..
ಈಪೇಜ್ ನಿಮ್ಮ ಸ್ನೇಹಿತರಿಗೆಲ್ಲ ಶೇರ್ ಮಾಡಿ ಅವರಿಗೆ ಕೊಡ ಹೆಲ್ಪ್ ಬಹುದು. ಈ ಪೇಜ್ ಅನ್ ಫಾಲೋ ಮಾಡೋದು ಮರೀಬೇಡಿ.
0 Comments